
ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು ದೈವಸ್ಥಾನ – ಪಾಲೆಪ್ಪಾಡಿ ಹತ್ತೊಕ್ಲಿನ ಭಕ್ತಾಧಿಗಳಿಂದ ಶ್ರಮದಾನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು, ಪರಿವಾರ ದೈವಗಳ ಮತ್ತು ಪಾಲೆಪ್ಪಾಡಿ ಶ್ರೀ ಪಂಜುರ್ಲಿ ದೈವದ ಹಾಗೂ ದರ್ಖಾಸ್ತು ಉಳ್ಳಾಕ್ಲು,ಅಡ್ಯಂತಾಯ ಕಟ್ಟೆಯ ನವೀಕರಣ ಪ್ರತಿಷ್ಠಾ ಕಲಶವು ಫೆ.23 ರಿಂದ ಫೆ.27 ರವರೆಗೆ ನಡೆಯಲಿದ್ದು ರಾತ್ರಿ ಹಗಲು ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಪಾಲೆಪ್ಪಾಡಿ ಹತ್ತೊಕ್ಲಿಗೆ ಸಂಬಂಧಪಟ್ಟ ಭಕ್ತಾಧಿಗಳು ಶ್ರಮದಾನ ನಡೆಸಿದರು.