
ವೈದ್ಯಕೀಯ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಬೇಕು. ಯಾರಿಗೆ ಸೇವೆಯ ಅಗತ್ಯವಿದೆಯೋ ಅಂತವರಿಗೆ ನಗು ನಗುತ್ತಾ ಸೇವೆ ನೀಡುವುದು ವೈದ್ಯರ ಕರ್ತವ್ಯ. ನೀವೆಲ್ಲರೂ ಉತ್ತಮ ಸೇವೆ ನೀಡುವುದರ ಮೂಲಕ ನಿಮಗೂ, ನಿಮ್ಮ ಹೆತ್ತವರಿಗೂ ಮತ್ತು ವಿದ್ಯಾರ್ಜನೆ ಮಾಡಿದ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್. ಕೆ.ವಿ ಹೇಳಿದರು. ಅವರು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದಪ್ರತಿಷ್ಠಿತರಾಜ್ಯಒಕ್ಕಲಿಗರ ಸಂಘದಆರ್.ವಿ ಡೆಂಟಲ್‌ಕಾಲೇಜಿನಘಟ್ಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರುಡಾ. ಶ್ರೀ ಶ್ರೀಶ್ರೀನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರುಪದವಿ ಪ್ರಧಾನ ಮಾಡಿ ಶುಭ ಹಾರೈಸಿದರು. ನೃತ್ಯ ಸ್ವಾಗತದೊಂದಿಗೆಕಾರ್ಯಕ್ರಮ ಆರಂಭಗೊಂಡಿತು. ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೋನಪ್ಪ ರೆಡ್ಡಿಯವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀಶ್ರೀ ಸೌಮ್ಯನಾಥಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರ್.ವಿ ಡೆಂಟಲ್ ಕಾಲೇಜಿನ ಅಧ್ಯಕ್ಷರಾದ ಜೆ. ರಾಜುರವರು ಅತಿಥಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಸ್ವಾಗತಿಸಿದರು.