
ಸುಳ್ಯ ಗಾಂಧಿನಗರದಲ್ಲಿರುವ ನಾವೂರು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಶ್ರೀ ಕಲ್ಕುಡ ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ಫೆ.12ರಂದು ನಡೆಯಿತು. ಮುಂಜಾನೆ ಕಲ್ಕುಡ ಮತ್ತು ಕಲ್ಲುರ್ಟಿ ದೈವದ ಕೋಲವು ನಡೆದು ನೆರೆದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ಬಳಿಕ ಗುಳಿಗ ದೈವದ ಕೋಲ ನಡೆಯಿತು. ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.
ಹರಕೆಯ ಅಗೇಲು ಸೇವೆಯು ಫೆ.19 ಮತ್ತು ಮಾ.12 ರಂದು ಎರಡು ದಿವಸ ದೈವಸ್ಥಾನದಲ್ಲಿ ನಡೆಯಲಿದ್ದು ಅಗೇಲು ಸೇವೆಯ ರಶೀದಿಯನ್ನು ನೇಮೋತ್ಸವ ಸಂದರ್ಭದಲ್ಲಿ ನೀಡಲಾಯಿತು.
ಆಡಳಿತ ಧರ್ಮದರ್ಶಿಗಳಾದ ಪಿ.ಕೆ.ಉಮೇಶ್, ಭಾಸ್ಕರ ಗೌಡ ಐಡಿಯಲ್, ಪ್ರಕಾಶ್ ಹೆಗ್ಡೆ, ಕೆ.ಸೋಮನಾಥ ಪೂಜಾರಿ, ಹರೀಶ್ ಬೂಡುಪನ್ನೆ,ಕೇಶವ ನಾಯಕ್ , ಪಿ.ಆರ್
ಚಂದ್ರಶೇಖರ ಸುಳ್ಯ, ಸತ್ಯಪ್ರಸಾದ್ ಕೆ ಮೊದಲಾದವರು ಉಪಸ್ಥಿತರಿದ್ದರು. ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು, ಮೋನಪ್ಪ ಗೌಡ ಕೆರೆಮೂಲೆ ಸೇವೆ ಸಲ್ಲಿಸಿದರು.
ಸ್ಥಳೀಯ ಸಂಘಟನೆಯ ಯುವಕರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.