ಸುಳ್ಯ : ಕಾರ್ಮಿಕ ಸಮುದಾಯ ಭವನ ತಿಲಕ ಭವನ ಲೋಕಾರ್ಪಣೆ ಭಾರತೀಯ ಮಜ್ದೂರು ಸೇವಾ ಟ್ರಸ್ಟ್ ಸುಳ್ಯ ತಾಲೂಕು, ಆಟೋ ಚಾಲಕರ ಸಂಘ, ಕರ್ನಾಟಕ ಇಂಡಸ್ಟ್ರಿಯಲ್ ಸ್ಟಾಫ್ ಯೂನಿಯನ್ ಇವರ ವತಿಯಿಂದ ಸುಳ್ಯದ ಹಳೆಗೇಟಿನಲ್ಲಿ ನಿರ್ಮಾಣವಾದ ಕಾರ್ಮಿಕ ಸಮುದಾಯ ಭವನ *”ತಿಲಕ ಭವನ”* ದ ಉದ್ಘಾಟನೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ನೆರವೇರಿಸಿದರು.ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಅಣ್ಣಾ ವಿನಯಚಂದ್ರ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಭಾರತೀಯ ಮಜ್ದೂರು ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಸುಳ್ಯ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತ್ತಡ್ಕ, ಪ್ರಮುಖರಾದ ವಿಶ್ವನಾಥ್ ಶೆಟ್ಟಿ, ಭಾಸ್ಕರ ರಾವ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Thursday
- November 21st, 2024