ಅಡಿಕೆ ಹಳದಿ ರೋಗಕ್ಕೆ ಪರಿಹಾರ ನೀಡಲು ಒತ್ತಾಯಿಸಿ ತಾಲೂಕು ಮಟ್ಟದ ಸಮಾವೇಶಕ್ಕೆ ಸಿದ್ಧತೆ ಅಡಿಕೆ ಹಳದಿ ರೋಗಕ್ಕೆ ಪರಿಹಾರ ನೀಡಲು ಹಕ್ಕೋತ್ತಾಯ ಮಾಡಲು ತಾಲೂಕು ಮಟ್ಟದ ಸಮಾವೇಶ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಪೂರ್ವಭಾವಿ ಸಭೆಯನ್ನು ಗ್ರಾಮಮಟ್ಟದಲ್ಲಿ ಆಯೋಜಿಸಲು ಒಕ್ಕೂಟ ವಲಯಧ್ಯಕ್ಷರು, ವಿಪತ್ತು ನಿರ್ವಹಣೆ ಘಟಕ ಸಂಯೋಜಕರ ನೇತೃತ್ವದಲ್ಲಿ ಧರ್ಮಸ್ಥಳ ಯೋಜನಾ ಕಚೇರಿಯಲ್ಲಿ ಸಭೆ ನಡೆಯಿತು. ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾಹಿತಿ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಗ್ರಾಮ ಮಟ್ಟದ ಸಭೆಯ ದಿನಾಂಕ ನಿಗದಿ ಮಾಡಲಾಯಿತು. ಹಳದಿ ರೋಗ ಪೀಡಿತ ಅಡಿಕೆ ಬೆಳೆಗಾರರ ಸಮಿತಿ ಸಂಚಾಲಕ ಎನ್. ಎ. ರಾಮಚಂದ್ರ, ಎಂ. ವೆಂಕಪ್ಪ ಗೌಡ ಸಭೆಯನ್ನು ನಡೆಸುವ ಉದ್ದೇಶ ತಿಳಿಸಿದರು. ಫೆಬ್ರವರಿ 15ರಂದು ನವಜೀವನ ಶತದಿನೋತ್ಸವ ಧರ್ಮಸ್ಥಳದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಚರ್ಚಿಸಲಾಯಿತು. ತಾಲೂಕು ಯೋಜನಾಧಿಕಾರಿ ನಾಗೇಶ್, ಕೇಂದ್ರ ಒಕ್ಕೂಟ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಶೌರ್ಯ ವಿಪತ್ತು ನಿರ್ವಹಣೆ ಘಟಕ ಸಂಯೋಜಕರು, ಒಕ್ಕೂಟ ವಲಯಾಧ್ಯಕ್ಷರು, ಮೇಲ್ವಿಚಾರಕರು ಉಪಸ್ಥಿತರಿದ್ದರು.
- Thursday
- November 21st, 2024