
ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚೇತನ್ ಮುಂಡೋಡಿ ಪ್ರಥಮ ಮೈಸೂರಿನ ಸೈಂಟ್ ಪಿಲೋಮೀನ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಚೇತನ್ ಮುಂಡೋಡಿ ಯವರು ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ದೇವಚಳ್ಳ ಗ್ರಾಮದ ಉಮೇಶ್ ಮುಂಡೋಡಿ ಮತ್ತು ಮೀನಾಕ್ಷಿ ಮುಂಡೋಡಿ ಅವರ ಪುತ್ರ. ಪ್ರಸ್ತುತ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಇಲ್ಲಿಯ 8ನೇ ತರಗತಿಯ ವಿದ್ಯಾರ್ಥಿ.