ಗುತ್ತಿಗಾರು :- ಅಮರ ಸಂಜೀವಿನಿ ಒಕ್ಕೂಟದ ಸಭೆ ಹಾಗೂ ಮಾಹಿತಿ ಕಾರ್ಯಗಾರ ಜ.06 ರಂದು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ವತಿಯಿಂದ ಸಂಜೀವಿನಿ ಸದಸ್ಯೆಯರಿಗೆ ಸ್ವ ಉದ್ಯಮ ಹಾಗೂ ಉದ್ಯಮ ನಡೆಸಲು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಸಹಾಯಧನ ಹಾಗೂ ಕೃಷಿ ಪೌಷ್ಟಿಕ ತೋಟ-ಎಫ್.ಎಸ್.ಎಸ್.ಐ ನೋಂದಣಿ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕೊಯ್ಲಸ್ ಗ್ರೂಪ್ ಪುತ್ತೂರು ಹಾಗೂ ದೇವಸ್ಥಾನಗಳ ಧಾರ್ಮಿಕ ಉತ್ಪನ್ನಗಳ ತಯಾರಕರು ಮತ್ತು ವ್ಯಾಪಾರಸ್ಥರಾದ ನವೀನ್ ಕೊಯ್ಲ, ಕೆನರಾ ಬ್ಯಾಂಕ್ ಸಾಕ್ಷರತಾ ಕೇಂದ್ರ ಸುಳ್ಯದ ಆಪ್ತ ಸಮಾಲೋಚಕರಾದ ಶ್ರೀಮತಿ ಸುಜಾತ, ಎನ್.ಆರ್.ಎಲ್.ಎಂ ಸುಳ್ಯ ತಾಲೂಕು ಕ್ಲಸ್ಟರ್ ಮಟ್ಟದ ಮೇಲ್ವಿಚಾರಕರಾದ ಅವಿನಾಶ್ ಕೃಷಿ ಪೌಷ್ಟಿಕ ತೋಟದ ಬಗ್ಗೆ ಹಾಗೂ ಎಫ್.ಎಸ್.ಎಸ್.ಐ ಬಗ್ಗೆ ಬಗ್ಗೆ ಹಾಗೂ ಕೌಶಲ್ಯಾಭಿವೃದ್ಧಿ ಮೇಲ್ವಿಚಾರಕರಾದ ಮೇರಿ ಇವರು ಸದಸ್ಯರಿಗೆ ಮಾಹಿತಿ ನೀಡಿದರು. ಯಶಸ್ವಿ ಸಂಜೀವಿನಿ ಸಂಘದ ಯಶ್ವಿನಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ದಿವ್ಯ ಸುಜನ್ ಗುಡ್ಡೆಮನೆ, ಪಂಚಾಯತ್ ಸದಸ್ಯೆ ಲತಾ ಅಜಡ್ಕ, ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿ ಸಂಘದ ಸದಸ್ಯೆಯರಾದ ಯಶ್ವಿನಿ, ಜಯಂತಿ, ಲತಾ, ಲೀಲಾವತಿ, ರೇವತಿ, ಪುಷ್ಪಾವತಿ, ನವ್ಯ, ಭಾಗ್ಯಶ್ರೀ, ಕಲಾವತಿ, ಶಾರದಾ, ದುರ್ಗಾವತಿ ಇವರುಗಳು ನಡೆಸಿಕೊಟ್ಟರು. ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಯಮಿತಾ ಪೂರ್ಣಚಂದ್ರ, ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಕೋಶಾಧಿಕಾರಿ ಸೆಲಿನಾ ಸೆಬಾಸ್ಟಿನ್, ಎಲ್.ಸಿ.ಆರ್.ಪಿ ದಿವ್ಯ ಚತ್ರಪ್ಪಾಡಿ, ಗ್ರಂಥಪಾಲಕಿ ಅಭಿಲಾಷ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಸಂಜೀವಿನಿ ಸದಸ್ಯೆಯರು ಉಪಸ್ಥಿತರಿದ್ದರು.ಭಾಗ್ಯಶ್ರೀ ಸ್ವಾಗತಿಸಿ, ನವ್ಯ ವಂದನಾರ್ಪಣೆ ಮಾಡಿದರು. ರೇವತಿ ಕಾರ್ಯಕ್ರಮ ನಿರೂಪಣೆ ಮಾಡಿದರು.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024