Ad Widget

ಆಲೆಟ್ಟಿ ಗುಂಡ್ಯ ಮಾಡಾರಮನೆ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಉಳ್ಳಾಕುಲು ಸಪರಿವಾರ ದೈವಗಳ ಧರ್ಮ ನಡಾವಳಿ ನೇಮೋತ್ಸವ


ಆಲೆಟ್ಟಿ ಶ್ರೀ ಸದಾಶಿವ ಕ್ಷೇತ್ರದ ಗುಂಡ್ಯ ಮಾಡಾರಮನೆ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳಧರ್ಮ ನಡಾವಳಿ ನೇಮೋತ್ಸವವು ಪೆ.,2ರಿಂದ 4 ರ ತನಕ ವೇ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಫೆ. 2ರಂದು ಸಂಜೆ ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಅಶೋಕ ಪ್ರಭುರವರು ಪ್ರಾರ್ಥನೆ ನೆರವೇರಿಸಿದರು. ಮರುದಿನ ಬೆಳಗ್ಗೆ ಉಗ್ರಾಣ ತುಂಬುವ ಕಾರ್ಯಕ್ರಮವಾಗಿ ಬಳಿಕ ತಂತ್ರಿಯವರ ಆಗಮನವಾಗಿ ಗಣಪತಿ ಹವನ, ನವಕ, ನವಕಾಭಿಷೇಕ, ನಾಗ ತಂಬಿಲ, ಸಪರಿವಾರ ದೈವ ದೇವರ ತಂಬಿಲ ನಡೆದು ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಅನ್ನಸಂತರ್ಪಣೆಯಾಯಿತು. ರಾತ್ರಿ ಶ್ರೀ ಉಳ್ಳಾಕುಳು ಸಪರಿವಾರ ದೈವದ ಭಂಡಾರ ಏರಿ ಧರ್ಮ ನಡಾವಳಿ ನೇಮೋತ್ಸವವು ಜರುಗಿತು. ಬಳಿಕ ವಾಲಸರಿಯಾಗಿ ಶ್ರೀ ಉಳ್ಳಾಕುಲು ದೈವದ ಕಿರಿಯರ ನೇಮ ಹಿರಿಯರ ನೇಮ ನಡೆದು ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಫೆ. 4 ರಂದು ಬೆಳಗ್ಗೆ ಸಪರಿವಾರ ದೈವಗಳಾದ ಶ್ರೀ ಮಲೆ ಚಾಮುಂಡಿ ದೈವ, ಶ್ರೀ ಪುರುಷ ದೈವ, ಶ್ರೀ ಮದಿಮಾಳ್, ಶ್ರೀ ಅಜ್ಜಿ, ಶ್ರೀ ಪೊಟ್ಟನ್ ದೈವ, ಶ್ರೀ ಪಂಜುರ್ಲಿ ದೈವ, ಶ್ರೀ ಕೂಜಿ ದೈವದ ನೇಮೋತ್ಸವವು ಜರುಗಿತು. ಆಗಮಿಸಿದ ಎಲ್ಲರಿಗೂ ಶ್ರೀಮುಡಿ ಗಂಧ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಶೋಕ ಪ್ರಭು, ಉಪಾಧ್ಯಕ್ಷ ಶಿವರಾಮ ರೈ ಗುಂಡ್ಯ ಹಾಗೂ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ. ಸ. ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ದೈವಸ್ಥಾನದ ಪೂಜಾರಿ ಮತ್ತು ನಾಲ್ಕು ಸ್ಥಾನಿಕ ಗುಂಡ್ಯ, ಪರಿವಾರ, ದೇವಸ್ಯ, ಮನೆತನದ ಕುಟುಂಬಸ್ಥರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading