

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ.13 ರಿಂದ ಫೆ.17 ರವರೆಗೆ ನಡೆಯಲಿದ್ದು, ಇಂದು (ಫೆ.09 ರಂದು) ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ ಪೂಜಾ ಕಾರ್ಯ ನೆರವೇರಿಸಿದರು. ಸಹಾಯಕ ಅರ್ಚಕ ಹೆಚ್.ವೆಂಕಟ್ರಮಣ ಭಟ್ ಸಹಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸುನಿಲ್ ರೈ ಪುಡ್ಕಜೆ, ಎ.ಕೆ.ಮಣಿಯಾಣಿ, ಪ್ರದೀಪ್ ಕುಮಾರ್ ರೈ ಪನ್ನೆಗುತ್ತು, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ನಾರಾಯಣ ಶೆಟ್ಟಿ, ವಿಠಲದಾಸ್ ಎನ್.ಎಸ್.ಡಿ, ಕೃಷ್ಣಪ್ಪ ಮೂಲ್ಯ, ನವೀನ ರೈ ತಂಬಿನಮಕ್ಕಿ, ಮೋನಪ್ಪ ತಂಬಿನಮಕ್ಕಿ, ನಾರಾಯಣ ಮಡಿವಾಳ, ಹೆಚ್.ವೆಂಕಟ್ರಮಣ ಭಟ್,ಜಗನ್ನಾಥ ಆಳ್ವ, ನಾಗೇಶ್ ಕುಲಾಲ್, ಸೋಮಶೇಖರ್, ಶ್ರೀಮತಿ ಗುಣವತಿ ಮಂಡೇಪು,ಶ್ರೀಮತಿ ಜಯಂತಿ, ಶ್ರೀಮತಿ ಹರಿಣಿ ರಾಜ್, ಜಯರಾಮ ಉಮಿಕ್ಕಳವಿಠಲ ರೈ, ಜಯಂತ ಮಡಿವಾಳ, ಉಕ್ರಪ್ಪ ಕಾಪಡ, ದೇವಸ್ಥಾನದ ಸಿಬ್ಬಂದಿ ಮಹೇಶ ಕಲ್ಪಣೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.