
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ದೊಡ್ಡ ತೋಟ ವಲಯದ ಅಮರ ಪಡ್ನೂರು ಗ್ರಾಮದ ದೊಡ್ಡಣ್ಣ ಗೌಡ ಕಾಯರ ಇವರಿಗೆ ಜಲಮಂಗಲ ಕಾರ್ಯಕ್ರಮದಲ್ಲಿ ಮಂಜುರಾದ ವೀಲ್ ಚೇರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಈ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಪು, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬೊಳ್ಳೂರು ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಕೋಟೆ ಬನ ಹಾಗೂ ಜೊತೆ ಕಾರ್ಯದರ್ಶಿ ಯಾಗಿರುವ ವಸಂತ ಚೊಕ್ಕಾಡಿ ಹಾಗೂ ಸೇವಾ ಪ್ರತಿನಿಧಿಯಾಗಿರುವ ಶ್ರೀಮತಿ ಹರ್ಷಿತ ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.