Ad Widget

ತಂಟೆಪ್ಪಾಡಿ ನಿನಾದದಲ್ಲಿ ಸಾಂಸ್ಕೃತಿಕ ಸೌರಭ, ಗೌರವಾರ್ಪಣೆ ; ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ: ಡಾ|| ಚೂಂತಾರು

. . . . . . .

ಹುಟ್ಟೂರಿನಲ್ಲಿ ತಮ್ಮದೇ ಜನರ ನಡುವೆ ಊರಿನ ಹಿರಿಯರೊಂದಿಗೆ, ಹಿರಿಯರಿಂದ ಸನ್ಮಾನ ಪಡೆಯುವುದು ಅತ್ಯಂತ ಸೌಭಾಗ್ಯದ ಮತ್ತು ಸ್ಮರಣೀಯವಾದ ಗಳಿಗೆ. ಈ ಸನ್ಮಾನದಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಮತ್ತಷ್ಟು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಸಮಾಜ ಮುಖಿ ಕೆಲಸ ಮಾಡಲು ಪ್ರೇರೇಪಣೆ ನೀಡಿದೆ ಎಂದು ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಿನಾದ ಸಂಸ್ಥೆ ತಂಟೆಪ್ಪಾಡಿ ವಸಂತ ಶೆಟ್ಟಿ ಬೆಳ್ಳಾರೆ ಅವರ ಸಮಥ್ಯ ಮುಂದಾಳತ್ವದಲ್ಲಿ ಸುಳ್ಯ ಬೆಳ್ಳಾರೆ ಪರಿಸರದ ಮಕ್ಕಳ ಪ್ರತಿಭೆಯನ್ನು ನೀರೆರೆದು ಪೋಷಿಸುವ ಕೆಲಸ ಮಾಡುತ್ತಿದೆ. ಈ ನಿನಾದ ಸಂಸ್ಥೆ ಮುಂದೆ ನಿನಾಸಂ ಸಂಸ್ಥೆಯ ಹಾಗೆ ದೊಡ್ಡ ಮಟ್ಟಿನಲ್ಲಿ ಬೆಳೆದು, ಸಾಂಸ್ಕøತಿಕ ಲೋಕದಲ್ಲಿ ಮಿನುಗುತಾರೆಯಾಗಿ ಬೆಳಗಲಿ ಎಂದು ಹಾರೈಸಿದರು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಪ್ರೊತ್ಸಾಹಿಸಿ ಬೆನ್ನು ತಟ್ಟಿದ ಕೆಲಸ ಶ್ಲಾಘನೀಯ ಎಂದು ಅವರು ನುಡಿದರು.

ತಂಟೆಪ್ಪಾಡಿ ನಿನಾದದಲ್ಲಿ ಸಾಂಸ್ಕೃತಿಕ ಸೌರಭ, ನಾಟಕ, ಗೌರವಾರ್ಪಣೆ

ವಸಂತ ಶೆಟ್ಟಿ ಬೆಳ್ಳಾರೆಯವರ ಮುಂದಾಳತ್ವ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಾಟಕ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ. 5ರಂದು ಸಂಜೆ ನಡೆಯಿತು. ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿಗಳಿಂದ ಮತ್ತು ನಿನಾದ ಸಾಂಸ್ಕೃತಿಕ ಕಲಾಕೇಂದ್ರದ ಕಲಾವಿದರಿಂದ ಹಾಡು ಮತ್ತು ನೃತ್ಯಗಳ ವೈವಿದ್ಯಮಯ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ
ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಳಿಮೋಹನ್ ಚೂಂತಾರು ಮತ್ತು ಅನರ್ಘ್ಯ ಐಏಎಸ್ ಕಾಡೆಮಿ ನವದೆಹಲಿ ಮತ್ತು ಬೆಂಗಳೂರು ಇದರ ಸಂಸ್ಥಾಪಕರಾದ ಮನೋಜ್ ಮಡ್ತಿಲರಿಗೆ ಗೌರವಾರ್ಪಣೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಮುದ್ದುಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಲಾಕೇಂದ್ರದ ಅಧ್ಯಕ್ಷ ಐತ್ತಪ್ಪ ಶೆಟ್ಟಿ, ಉಪಾಧ್ಯಕ್ಷ ವಾಸಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಷ್ಮಾ ಸತೀಶ್ ಭಂಡಾರಿ ಸನ್ಮಾನಿತರ ಪರಿಚಯ ಮಾಡಿದರು. ನಿನಾದ ಸಾಂಸ್ಕೃತಿಕ ಕಲಾಕೇಂದ್ರದ ಕಾರ್ಯದರ್ಶಿ ವಸಂತ ಶೆಟ್ಟಿ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿನಾದದ ಉಪಾಧ್ಯಕ್ಷ ವಾಸಪ್ಪ ಶೆಟ್ಟಿ ವಂದಿಸಿದರು. ಪ್ರಗತಿ ಆಂಗ್ಲ ಮಾದ್ಯಮ ಶಾಲಾ ಕನ್ನಡ ಭಾಷಾ ಶಿಕ್ಷಕಿ ವಿನಯ ಶೆಟ್ಟಿ ಅತಿಥಿ ಮುದ್ದುಕೃಷ್ಣರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೈವಲ್ಯ ಕಲಾಕೇಂದ್ರ ಬೆಂಗಳೂರು ಅಭಿನಯಿಸಿದ ನಾಟಕ ಮಾಧವಿ ಇದರ ಪ್ರದರ್ಶನ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!