ಕನಸು ಕೇಳಿದೆ ಮನಸನ್ನು ಎತ್ತ ಸಾಗುವುದು ಈ ಪಯಣ,
ಮನಸು ಹೇಳಿದೆ ಕನಸಲ್ಲಿ ತಿಳಿಯದೂರಿನ ಕಡೆ ಪಯಣ…
ಏಕಾಂಗಿ ಈ ಮನವು ಸಂತೈಸಿದೆ ತನ್ನಂತಾನೇ,
ನೋವನ್ನು ಮರೆಮಾಚಿ ಮುಖದಲ್ಲಿ ನಗುವಿರಿಸಿ ನಡೆದಿದೆ ಮುಂದೆ ಮುಂದೇನೇ…
ಪ್ರತಿ ರಾತ್ರಿ ಬೀಳೋ ಕನಸಲ್ಲೂ ನಾಳೆಯ ಚಿಂತೆ ತಾನೇ,
ನಾಳೆಯ ಚಿಂತೆಯಲ್ಲಿ ಇಂದಿನ ಈ ದಿನವು ಮುಗಿಯೋದೇನೇ…
ಚಿಂತೆ ಮಾಡುವುದ ಬಿಟ್ಟುಬಿಡು, ಗೆಲುವ ಕಡೆಗೆ ನೀ ನಡೆದುಬಿಡು, ಮನದ ನೋವುಗಳ ಮರೆತುಬಿಡು, ಛಲವ ಮನದೊಳಗೆ ತುಂಬಿಬಿಡು…
ಅವಮಾನವನ್ನು ಮರೆಯದಿರು, ಗೆದ್ದು ಉತ್ತರವ ನೀಡಿಬಿಡು…
ಬದುಕಿನಲ್ಲಿ ಸೋತಿರುವ ನೂರಾರು ಮನಗಳಿಗೆ ನೀ ಸ್ಪೂರ್ತಿಯಾಗುವಂತೆ ಬೆಳೆದುಬಿಡು, ಬದುಕಿನಲ್ಲಿ ಬೆಳೆದುಬಿಡು…
ನೀ ನಡೆದಂತ ದಾರಿಯನ್ನು, ಕಲಿತಂತ ಪಾಠವನ್ನು ಮರೆಯದಿರು, ಬದುಕಿನಲ್ಲಿ ಎಂದೆಂದೂ ಮರೆಯದಿರು…
✍️ಉಲ್ಲಾಸ್ ಕಜ್ಜೋಡಿ