
“ಕಲೆ ಮತ್ತು ಸಂಸ್ಕೃತಿ ನಮ್ಮ ನೆಲದ ಉಸಿರು. ಅದನ್ನು ನಾವೆಲ್ಲ ಉಳಿಸಿ ಬೆಳೆಸಬೇಕು. ಯಕ್ಷಗಾನ ಎಂಬ ವಿಭಿನ್ನ ಕಲೆಯನ್ನು ನಾವೆಲ್ಲ ಜೊತೆಯಾಗಿ ಬೆಳೆಸೋಣ”ಎಂದು ಕೆನಡಾದಲ್ಲಿನ ಉದ್ಯಮಿ ಉಮೇಶ್ ಮುಂಡೋಡಿ ಹೇಳಿದರು.
ಅವರು ಕಂದ್ರಪ್ಪಾಡಿಯ ಹರಿಜನ ಗಿರಿಜನ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 5 ರಂದು ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ವತಿಯಿಂದ ನಡೆಸುವ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸೇವಾ ಪ್ರತಿನಿಧಿ ತಿಮ್ಮಪ್ಪ ಗೌಡ ಕಡ್ಯರವರು “ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕು. ಯಕ್ಷಗಾನವೆಂಬ ನಮ್ಮ ನೆಲದ ಕಲೆ ಎಂದು ಅಮರವಾಗಬೇಕು ಆ ನಿಟ್ಟಿನಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಕಾರ್ಯವು ಶ್ಲಾಘನೀಯ” ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾವಿದರು ಆದ ಪಾಲನೇತ್ರ ಮುಂಡೋಡಿಯವರು ಮಾತನಾಡಿ,” ಹಳ್ಳಿ ಹಳ್ಳಿಗಳಲ್ಲೂ ಯಕ್ಷಗಾನದ ಕಂಪು ಇದೆ ಇದನ್ನು ಎಲ್ಲಾ ಕಲಾ ಪ್ರೇಮಿಗಳು ಆರಾಧಿಸುತ್ತಾರೆ ಆಸಕ್ತರೆಲ್ಲರೂ ಯಕ್ಷಗಾನವನ್ನು ಕಲಿತು ನೋಡಬೇಕು ಕಲೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು ಈ ಜಲಶ್ರೀ ಪ್ರತಿಷ್ಠಾನದ ಕನಸಿನ ಕಾರ್ಯಕ್ರಮವಾದ ಯಕ್ಷಗಾನ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಹೇಳಿದರು. ಈ ಸಂದರ್ಭ ವೇದಿಕೆಯಲ್ಲಿ ಯಕ್ಷಗಾನ ಗುರುಗಳಾದ ಬಾಲಸುಬ್ರಹ್ಮಣ್ಯ ಭಟ್ ದೇವಶ್ಯ, ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಹಿರಿಯ ಸದಸ್ಯರಾದ ಕುಸುಮಾಧರ ಗೌಡ ಕೊಂಬೆಟ್ಟು ಉಪಸ್ಥಿತರಿದ್ದರು.
ಶರತ್ ಮರ್ಗಿಲಡ್ಕ ವಂದಿಸಿದರು. ನಿರಂಜನ್ ಕಡ್ಲಾರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.