
ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.02 ರಂದು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸಮಿತಿಯ ಸದಸ್ಯರಾದ ಚಂದ್ರಹಾಸ ಶಿವಾಲ, ಶರತ್ ಡಿ.ಎಸ್, ಭವಾನಿಶಂಕರ ಪೈಲಾಜೆ, ಆನಂದ ಕೆರೆಕ್ಕೋಡಿ, ಚಂದ್ರಶೇಖರ ಕಿರಿಭಾಗ, ರೇಷ್ಮಾ ಕಟ್ಟೆಮನೆ, ಜ್ಯೋತಿ ಕಳಿಗೆ, ಶ್ರೀ ದೇವಳದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ, ಆರ್ಥಿಕ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಕಿರಿಭಾಗ ಹಾಗೂ ಸದಸ್ಯರುಗಳು, ದೇವಸ್ಥಾನದ ಮ್ಯಾನೇಜರ್ ಲೋಕನಾಥ್ ಕಿರಿಭಾಗ, ಎಲ್ಲಾ ಉಪಸಮಿತಿಯ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.