Ad Widget

ಜ.24 (ನಾಳೆ) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಜನವರಿ 24 ಮಂಗಳವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ. ಕೇರ್ಪಳ, ಡಿಪೋ, ಶ್ರೀರಾಂಪೇಟೆ, ಜಬಳೆ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಆರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ...

ಫೆ.2-4: ಆಲೆಟ್ಟಿ ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ಧರ್ಮ ನಡಾವಳಿ

ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.೧೪ರಂದು ದೈವಸ್ಥಾನದ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ಅಶೋಕ ಪ್ರಭು ಸುಳ್ಯ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಸುಧಾಮ ಆಲೆಟ್ಟಿ, ಕೆ.ಕೆ ಮಹಾಲಿಂಗೇಶ್ವರ ಭಟ್ ನೆಡ್ಚಿಲು , ಕೆ.ಕೆ ವೆಂಕಟ್ರಮಣ ಭಟ್ ನೆಡ್ಚಿಲು, ಜನಾರ್ಧನ ಗೌಡ ಗುಂಡ್ಯ, ನಾಲ್ಕು ಸ್ಥಾನಿಕ ಮನೆಯ ಪೂಜಾರಿಗಳಾದ...
Ad Widget

ಸುಳ್ಯ : ಶ್ರೀರಾಮ್ ಫೈನಾನ್ಸ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ಹಸ್ತಾಂತರ

ಶ್ರೀರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಸುಳ್ಯ ಶಾಖಾ ವತಿಯಿಂದ ಸುಳ್ಯ ತಾಲೂಕಿನ ಆಯ್ದ ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಜ. 20 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಕಂಪೆನಿಯ ಸಂಸ್ಥೆಯ ಝೂನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ...

ಪ್ರಾ.ಕೃ.ಪ.ಸ.ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮ, ಹಾಗೂ ಸಾಧಕರಿಗೆ ಸನ್ಮಾನ ವ್ಯಕ್ತಿತ್ವ ತುಂಬಿದ ವ್ಯಕ್ತಿಗಳಿಂದ ಒಳ್ಳೆಯ ಸಮಾಜ ಕಟ್ಟಲು ಸಾದ್ಯ – ಒಡಿಯೂರು ಶ್ರೀ

ವ್ಯಕ್ತಿತ್ವ ತುಂಬಿದ ವ್ಯಕ್ತಿಗಳಿಂದ ಒಳ್ಳೆಯ ಸಮಾಜ ಕಟ್ಟಲು ಸಾದ್ಯ ಎಂದುಒಡಿಯೂರು ಗುರದೇವದತ್ತ ಸಂಸ್ಥಾನ ಮಠದ ಸ್ವಾಮೀಜಿ ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಶತ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶತ ಸಂಭ್ರಮ ಸಹಸ್ರ ಸಂಭ್ರಮಕ್ಕೆ ಮುನ್ನುಡಿಯಾಗಲಿ. ವ್ಯಕ್ತಿತ್ವ ತುಂಬಿರುವ ವ್ಯಕ್ತಿಯಿಂದ ಸಮಾಜ ಕಟ್ಟಬಹುದು ಎನ್ನುವುದಕ್ಕೆ ಸಹಕಾರಿ ಸಂಘ ಉತ್ತಮ ಉದಾಹರಣೆ ಎಂದರು. ರಾಜ್ಯ ಬಂದರು...

ಮರ್ಕಂಜ : ನಾಪತ್ತೆಯಾಗಿದ್ದ ಮಹಿಳೆ ಪತ್ತೆ – ತಾಯಿ ಮನೆ ತಲುಪಿದ ವಿವಾಹಿತ ಮಹಿಳೆ

ಜ.21 ರಂದು ಮರ್ಕಂಜದಿಂದ ಔಷಧಿಗೆಂದು ತೆರಳಿದ ವಿವಾಹಿತ ಮಹಿಳೆ ಕೀರ್ತಿಶ್ರೀ ಗಂಡನ ಮನೆಗೂ, ತಾಯಿ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ರಾಜಶೇಖರ ಪೋಲೀಸರಿಗೆ ದೂರು ನೀಡಿದ್ದರು. ಜ.22 ರಂದು ಸಂಜೆ ಮಡಿಕೇರಿಯಲ್ಲಿ ಪತ್ತೆಯಾದ ಅವಳನ್ನು ತಾಯಿ ಮನೆಗೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ. ಔಷಧಿ ತರಲು ಹೋದವಳು ಯಾಕೆ ನಾಪತ್ತೆಯಾದಳು ಎಂಬ ಬಗ್ಗೆ ಇನ್ನಷ್ಟೇ...

ಕುಚ್ಚಾಲ ; ಶ್ರೀ ಮಲೆ ಉಳ್ಳಾಕ್ಲು ದೇವಸ್ಥಾನದಲ್ಲಿ ಶ್ರಮದಾನ – ಫೆ 4 ಮತ್ತು 5 ರಂದು ನೇಮೋತ್ಸವ

ದೇವಚಳ್ಳ ಗ್ರಾಮದ ಕುಚ್ಚಾಲ ಶ್ರೀ ಮಲೆ ಉಳ್ಳಾಕ್ಲು ಸಪರಿವಾರ ದೈವಗಳ ದೇವಸ್ಥಾನದಲ್ಲಿ ಜ. 30ರಂದು ದೈವಗಳ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಫೆ.4 ಮತ್ತು 5 ರಂದು ದೈವಗಳ ನೇಮೋತ್ಸವ ನಡೆಯಲಿದೆ. ಇದರ ಅಂಗವಾಗಿ ಊರವರು ಶ್ರಮದಾನ ನಡೆಸಿ ಸ್ವಚ್ಚತಾ ಕಾರ್ಯ ಹಾಗೂ ಚಪ್ಪರ ಹಾಕುವ ಕಾರ್ಯ ನಡೆಸಿದರು. ಆಡಳಿತ ಮಂಡಳಿ ಸದಸ್ಯರು ಹಾಗೂ ಊರ...

ವಳಲಂಬೆ ಶಾಲೆಗೆ ಫ್ಯಾನ್ ಕೊಡುಗೆ

ವಳಲಂಬೆ ಶಾಲಾ ಎಸ್.ಡಿ.ಎಂ.ಸಿ. ಸದಸ್ಯ ಯುವರಾಜ ಅಡ್ಡನಪಾರೆ ಮತ್ತು ಅವರ ಮಗ ದಿಶಾಂತ್ ಶಾಲೆಗೆ ಫ್ಯಾನ್ ನೀಡಿದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಗೋಪಿನಾಥ್ ಮೆತ್ತಡ್ಕ ರಿಗೆ ಫ್ಯಾನ್ ಹಸ್ತಾಂತರಿಸಿದರು.

ವಿ. ವಿ.ಅಂತರ್ ರಾಷ್ಟ್ರ ಮಟ್ಟದ ವೈಟ್ ಲಿಫ್ಟಿಂಗ್ ನಲ್ಲಿ ಭಾಗವಹಿಸಲು ಜಶ್ವಿತಾ ದಂಬೆಕೋಡಿ ಆಯ್ಕೆ

ಜನವರಿ 27 ರಿಂದ 29ರವರೆಗೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರ ಮಟ್ಟದ ವಿ. ವಿ. ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಜಸ್ವಿತಾ ದಂಬೆಕೋಡಿ ಆಯ್ಕೆ ಆಗಿದ್ದಾರೆ. ಇವರು ಪ್ರಸ್ತುತ ಮೂಡಬಿದ್ರೆ ಯ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಪಿ.ಎಡ್. ವಿದ್ಯಾರ್ಥಿನಿಯಾಗಿದ್ದು, ಗುತ್ತಿಗಾರಿನ ವಳಲಂಬೆ ಯ ದಂಬೆಕೋಡಿ ರಾಘವ ಮತ್ತು ಯಶೋಧ ದಂಪತಿಗಳ ಪುತ್ರಿ.

ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರಾಗಿ ಟಿ. ಎಂ ಶಾಹಿದ್ ತೆಕ್ಕಿಲ್ ನೇಮಕ

ಚುನಾವಣೆಯ ಹಿತೈದೃಷ್ಟಿಯಿಂದ ಪಕ್ಷದ ಪರವಾಗಿ ಸಮರ್ಥವಾಗಿ ಮಧ್ಯಮದ ಮುಖಾಂತರ ಪಕ್ಷದ ಜನರಿಗೆ ಸಂದೇಶ ಮುಟ್ಟಿಸಲು ಕೆಪಿಸಿಸಿ ಅಧ್ಯಕ್ಷರಾದ ಶ್ರೀ. ಡಿ. ಕೆ. ಶಿವಕುಮಾರ್ ಆದೇಶದ ಮೇರೆಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ ಖರ್ಗೆ ಯವರು ಟಿ.ಎಂ ಶಾಹೀದ್ ತೆಕ್ಕಿಲ್ ರವರನ್ನು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರಾಗಿ ನೇಮಕ ಗೊಳಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ...

ಮರ್ಕಂಜ : ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಕಾಣೆ – ದೂರು ದಾಖಲು

ಔಷಧಿಗೆಂದು ತೆರಳಿದ ಪತ್ನಿ ಕೀರ್ತಿಶ್ರೀ ಮರಳಿ ಮನೆಗೆ ಬಾರದೇ ತಾಯಿ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ಮರ್ಕಂಜ ಗ್ರಾಮದ ರಾಜಶೇಖರ ಎಂಬವರು ಪೋಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ಕಳೆದ ತಿಂಗಳು ಡಿ.26 ರಂದು ಇವರ ಮದುವೆ ನಡೆದಿತ್ತು.ಪತ್ನಿ ಕೀರ್ತಿಶ್ರೀ (26 ವರ್ಷ) ಜನವರಿ 21ರಂದು ಎಲಿಮಲೆ ಕ್ಲಿನಿಕ್‌ಗೆ ಮದ್ದಿಗೆಂದು ಹೋದವರು ಮರಳಿ ಮನೆಗೆ...
Loading posts...

All posts loaded

No more posts

error: Content is protected !!