Ad Widget

ಶೇಷಪ್ಪ ಗೌಡ ಕಾಜಿಮಡ್ಕ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಕಾಜಿಮಡ್ಕ ಶೇಷಪ್ಪ ಗೌಡ ಅಲ್ಪಕಾಲದ ಅಸೌಖ್ಯದಿಂದ ಜ.4ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ರೇವತಿ, ಪುತ್ರರಾದ ಜಯಂತ, ರಾಜೇಶ್, ಗುರುದೀಪ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಜ.21-22ರಂದು ನಡೆಯುವ ಸಂಪಾಜೆ ಸೊಸೈಟಿಯ ಶತಮಾನೋತ್ಸವ ಆಮಂತ್ರಣ ಬಿಡುಗಡೆ

ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ಯವರ ನೇತೃತ್ವದಲ್ಲಿ ಸಂಘದ ಕಛೇಯಲ್ಲಿ ಗಣ್ಯರ ಸಮ್ಮುಖದಲ್ಲಿ ಆಮಂತ್ರಣ ಬಿಡುಗಡೆ ನಡೆಯಿತು. ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆ, ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಂದು ಮನೆಗೆ ಆಮಂತ್ರಣ ತಲುಪುವಂತೆ ಜವಾಬ್ದಾರಿ ನೀಡಲಾಯಿತು. ವಿವಿಧ ಸಮಿತಿಯ ಸಂಚಾಲಕರು ಅವರವರ ಅಭಿಪ್ರಾಯ ಮಂಡಿಸಿದರು,...
Ad Widget

ಬಾಲಕಿ ಮೋಟ್ನೂರು ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಮೋಟ್ನೂರು ದಿ. ವೀರಪ್ಪ ಗೌಡರ ಧರ್ಮಪತ್ನಿ ಬಾಲಕಿ ಮೋಟ್ನೂರು ಜ.2 ರಂದು ನಿಧನರಾದರು. ಮೃತರು ಪುತ್ರಿಯರಾದ ಮೀನಾಕ್ಷಿ ಕಡ್ಲಾರು, ಜಯ, ಇಂದಿರಾ , ರೇವತಿ, ಪುತ್ರ ಶಿವಪ್ರಸಾದ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದ.ಕ.ಜಿಲ್ಲಾ ಸಮ್ಮೇಳನದಲ್ಲಿ ಗೌರವಾರ್ಪಣೆ

ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಇಂದು ನಡೆದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಜಿಲ್ಲಾ ಸಮ್ಮೇಳನ 'ಸಾಧನ ಸಂಭ್ರಮ-2023' ದಲ್ಲಿ ಸುಳ್ಯ ತಾಲೂಕು ಪತ್ರಕರ್ತರ ಸಂಘವನ್ನು ಗೌರವಿಸಲಾಯಿತು.ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಸುಳ್ಯ ತಾಲೂಕು...

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನಾ ಸಮಾರಂಭ ಮಂಗಳವಾರ ಶಾಲಾ ಕ್ರೀಡಾಂಗಣ ದಲ್ಲಿ ನಡೆಯಿತು. ಕ್ರೀಡಾಕೂಟ ವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ದೀಪಬೆಳಗಿಸಿ ಉದ್ಘಾಟಿಸಿದರು .ಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕತ್ತಾರ್ ಇಬ್ರಾಹಿಂ, ಖಜಾಂಜಿ ಶ್ರೀನಿವಾಸ ಭಟ್, ಜತೆ...

ಜಯನಗರ: ಶ್ರೀ ಗುಳಿಗ ದೈವದ ಕಟ್ಟೆಯಲ್ಲಿ ಶುದ್ಧಿಕಲಶ

ಶ್ರೀ ಗುಳಿಗನ ಕಟ್ಟೆ ಅಭಿವೃದ್ಧಿ ಸಮಿತಿ ವತಿಯಿಂದ ಜಯನಗರದ ನಿಸರ್ಗ ಇಂಡಸ್ಟ್ರೀಸ್ ಬಳಿ ನಿರ್ಮಾಣಗೊಂಡಿರುವ ಶ್ರೀ ಗುಳಿಗ ದೈವದ ಕಟ್ಟೆಯಲ್ಲಿ ಶುದ್ಧಿಕಲಶ ನಡೆಯಿತು.ಬೆಳಗ್ಗೆ 8 ಗಂಟೆಯಿಂದ ಪೆರಾಜೆ ಶ್ರೀ ವೇದವ್ಯಾಸ ತಂತ್ರಿಗಳ ಮುಂದಾಳತ್ವದಲ್ಲಿ ಗಣಪತಿ ಹವನ,ಗುಳಿಗ ದೈವದ ಕಟ್ಟೆಗೆ ಸೀಯಾಳ ಅಭಿಷೇಕ ನಡೆದು ಬಳಿಕ ಶುದ್ಧಿಕಲಶ ನಡೆಯಿತು.ಮದ್ಯಾಹ್ನದ ಮಹಾಪೂಜೆಯ ಬಳಿಕ ಅನ್ನದಾನ ನಡೆಯಿತು.ಕಾರ್ಯಕ್ರಮದಲ್ಲಿ ಪುಂಡರಿಕ ಭಟ್,ಗೌತಮ್...

ಮೀನುಗಾರಿಕಾ ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮರಿಂದ ಚಿಕ್ಕಮಂಗಳೂರಿನಲ್ಲಿ ಮಾರುಕಟ್ಟೆ ಉದ್ಘಾಟನೆ

ಮೀನುಗಾರಿಕೆ ಇಲಾಖೆ ಹಾಗೂ ಕರ್ನಾಟಕ ಮೀನುಗಾರಿಕೆ ನಿಗಮದ ವತಿಯಿಂದ ಚಿಕ್ಕಮಂಗಳೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಮೀನು ಮಾರುಕಟ್ಟೆ ಉದ್ಘಾಟನೆ ಇಂದು ನಡೆಯಿತು. ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಉದ್ಘಾಟಿಸಿ, ಮಾತನಾಡಿದರು.

ಚೆಂಬು : ಭಾರಿ ಅಗ್ನಿ ಅವಘಡ, ರಬ್ಬರ್ ಸ್ಮೋಕ್ ಹೌಸ್ ನಿಂದ ಮನೆಗೆ ಬೆಂಕಿ

ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿ ಸಮೀಪದಲ್ಲಿದ್ದ ಮನೆಗೂ ವ್ಯಾಪಿಸಿದ ಘಟನೆ ಜ.2 ರಂದು ನಡೆದಿದೆ. ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ಹಾನಿ ಸಂಭವಿಸಿದೆ. ರಬ್ಬರ್ ಶೀಟ್ ಒಣಗಿಸುವ ಸ್ಮೋಕ್ ಹೌಸ್ ಗೆ ಬೆಂಕಿ ಹೊತ್ತಿಕೊಂಡಿದ್ದು ಪರಿಣಾಮ ಬೆಂಕಿಯ ಕೆನ್ನಾಲಿಗೆಗಳು ಸುತ್ತಲಿಡೀ ವ್ಯಾಪಿಸಿ ಅಪಾರ ಪ್ರಮಾಣದ ಹಾನಿಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಕೃಷಿಕ...

” ಒಂದೇ ಸೂರಿನಡಿ ನೂರಾರು ಮಕ್ಕಳು ಭಜಿಸಿ ,ಶ್ಲೋಕ ಹೇಳಿ ಕುಣಿದು ಕುಪ್ಪಳಿಸಿದ ಬಾಲಸಂಗಮ”

ಎಲಿಮಲೆ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಮತ್ತು ಸೇವಾ ಭಾರತಿ helpline ಟ್ರಸ್ಟ್ (ರಿ) ಸುಳ್ಯ ಇವುಗಳ ಸಹಯೋಗದಲ್ಲಿ ಎಲಿಮಲೆ ಜ್ಞಾನ ದೀಪ ಶಾಲೆಯಲ್ಲಿ "ಬಾಲಸಂಗಮ " ನಡೆಯಿತು. ಸುಳ್ಯ ತಾಲೂಕಿನ ಹಲವಾರು ಅಂಗನವಾಡಿ,ಶಿಶುಮಂದಿರ ಹಾಗು ಬಾಲಗೋಕುಲದಿಂದ ಒಂಭತ್ತನೇ ತರಗತಿಯ ಒಳಗಿನ ನೂರಾರು ಮಕ್ಕಳ ಸಂಗಮಕ್ಕೆ ಎಲಿಮಲೆ ಜ್ಞಾನ ದೀಪ ಶಾಲೆ...

ಜಯನಗರ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಆರ್.ಕೆ.ನಾಯರ್ ಭೇಟಿ

ಗುಜರಾತಿನ ಕಚ್ ಪ್ರದೇಶದಲ್ಲಿ ಪ್ರಕೃತಿಯನ್ನು ಆರಾಧಿಸುತ್ತಾ,ಲಕ್ಷ ಲಕ್ಷ ಮರಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮ ಊರಿನವರೇ ಆದ ಆರ್.ಕೆ.ನಾಯರ್ ಅವರು ಇಂದು ಸುಳ್ಯ ತಾಲೂಕಿನ ಸುಳ್ಯ ಕಸಬಾ ಗ್ರಾಮ ಜಯನಗರದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ,ಶ್ರೀ ಗುಳಿಗ ದೈವ,ಶ್ರೀ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದರು.ಬಳಿಕ ದೈವಗಳ ಪ್ರಸಾದ ಸ್ವೀಕರಿಸಿ,ದೈವಸ್ಥಾನದ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ...
Loading posts...

All posts loaded

No more posts

error: Content is protected !!