- Saturday
- May 10th, 2025

ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ತಿಂಗಳ 3ನೇ ಶನಿವಾರ “ವಿದ್ಯುತ್ ಅದಾಲತ್ ನಡೆಸುವಂತೆ ಸರಕಾರದಿಂದ ಆದೇಶಿಸಿದ್ದು, ಅದರಂತೆ ಪ್ರಸಕ್ತ ತಿಂಗಳ ಮೂರನೇ ಶನಿವಾರ ಜ. 21ರಂದು ಪೂರ್ವಾಹ್ನ 11:00 ಗಂಟೆಗೆ ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಸಲು ತಿರ್ಮಾನಿಸಲಾಗಿದೆ. ಸದರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ವಿದ್ಯುತ್ ಗ್ರಾಹಕರಿಗೆ...

ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಸುಮನಾ ಬೆಳ್ಳಾರ್ಕರ್ , ಪಕ್ಷದ ಮುಖಂಡರು ಹಾಗೂ ಗುರುಪ್ರಸಾದ್ ಮೇರ್ಕಜೆ ನೇತೃತ್ವದಲ್ಲಿ, ಅಮರಮೂಡ್ನೂರು ಗ್ರಾಮದ ಮುಂಡಕಜೆಯ ವಾರ್ಡಿನಲ್ಲಿ ಸಮಸ್ಯೆ ಅಧ್ಯಯನ ಹಾಗೂ ಪ್ರಚಾರ ಅಭಿಯಾನ ನಡೆಸಿದರು. ಪರಿಶಿಷ್ಟ ವರ್ಗದ ನಿವಾಸಿಗಳ ಮುಂಡಕಜೆ ವಾರ್ಡಿನಲ್ಲಿ ಎರಡು ಮೂರು ದಶಕದಿಂದ ಬಾಕಿ ಉಳಿದಿರುವ ರಸ್ತೆ, ಮನೆ ನಿವೇಶನ...

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಮೊಗ್ರ ಮತ್ತು ಕಲ್ಮಕಾರು ಗ್ರಾಮದ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜ. 20ನೇ ಶುಕ್ರವಾರ ಪೂ.ಗಂಟೆ 10.30ಕ್ಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಸಭೆಯ ಉಸ್ತುವಾರಿ ಅಧಿಕಾರಿಗಳಾಗಿ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ಇವರು ಭಾಗವಹಿಸಲಿದ್ದಾರೆ. ಗ್ರಾಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ...

ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಿ ಅಧಿಕೃತವಾಗಿ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಸುಳ್ಯ ತಾಲೂಕು ಪಂಚಾಯತ್ ಎದುರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆ ಎರಡನೇಯ ದಿನಕ್ಕೆ ಕಾಲಿರಿಸಿದೆ.ಜ.17 ರಂದು ಸುಳ್ಯದ ಪರಿವಾರಕಾನ ನಿವಾಸಿ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಪ್ರತಿಭಟನೆಯು ಏಕಾಂಗಿ ಹೋರಾಟದ ಮೂಲಕ ಒಂದು ದಿನ ಪೂರೈಸಿ ಇದೀಗ...

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಮೋಹನ್ ಕುಮಾರ್ ಮುಂಡೋಡಿ ಅವರ ಮರಣ ನಿಧಿ ರೂ.5,000/- ವನ್ನು ಅವರ ಧರ್ಮಪತ್ನಿ ದುರ್ಗ ಸುಮಿತ್ರಾ ಇವರಿಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಕುಮಾರ್ ಮತ್ತು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸೂಪರ್ ವೈಸರ್ ಮನೋಜ್ ಕುಮಾರ್ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರು ಹಸ್ತಾಂತರಿಸಿದರು.

ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ಯುವತಿಯನ್ನು ಮನೆಯ ಅಂಗಳದಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಉಮೇಶನನ್ನು ದೂರ ಮಾಡಿದ್ದು,...

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಯಲ್ಲಿರುವ ಕಟ್ಟೆಗೆ ಜ.17 ರಂದು ರಾತ್ರಿ ಕಟ್ಟೆಗೆ ಡಿಕ್ಕಿಯಾದ ಘಟನೆ ನಡದಿದೆ. ಹಾಸನದಿಂದ ಬೈಹುಲ್ಲು ತಂದು ಮಾರಾಟ ಹಿಂತಿರುಗುವ ವೇಳೆ ಕಟ್ಟೆಗೆ ಡಿಕ್ಕಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಅರಂತೋಡು ಮಾಣಿ ಮೈಸೂರು ರಸ್ತೆ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ. ಚಾಲಕ ಮಡಿಕೇರಿ ಯಿಂದ ಸುಳ್ಯ ಕಡೆ ಕಾರು ಚಲಾಯಿಸಿಕೊಂಡು ಬರುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕನಸುಗಳಿರುತ್ತವೆ, ಏನಾದರೂ ಸಾಧಿಸ್ಬೇಕು ಅನ್ನೋ ಆಕಾಂಕ್ಷೆ ಇರುತ್ತದೆ. ಹಾಗಂತ ಸಾಧನೆ ಅನ್ನೋದು ಅಂದುಕೊಂಡ ತಕ್ಷಣ ಸಿಗುವಂಥದ್ದಲ್ಲ ಅಥವಾ ಒಂದೆರಡು ದಿನದಲ್ಲಿ ಆಗುವಂಥದ್ದಲ್ಲ.ಈಗ ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ದಾನೆ ಅಂದ್ರೆ ಅವನೇನು ಒಂದೆರಡು ದಿನದಲ್ಲಿ ಆ ಮಟ್ಟಕ್ಕೆ ಬೆಳೆದಿರುವುದಿಲ್ಲ ಅಥವಾ ಸಾಧನೆ ಮಾಡಿರುವುದಿಲ್ಲ. ಆದರೆ ನಮಗೆ ನೋಡುವವರಿಗೆ ಅವನ ಸಾಧನೆ...

ಅಜ್ಜಾವರ, ಮಂಡೆಕೋಲು ಹಾಗೂ ಕನಕಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಚಿವರಾದ ಎಸ್. ಅಂಗಾರರವರು ಇಂದು ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು. *ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯರಾಜ್ ಕುಕ್ಕೇಟಿ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಂಕರ್ ಪೆರಾಜೆ,...

All posts loaded
No more posts