ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಸಮಿತಿಗಳನ್ನು ಪುನರ್ ರಚಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸುಳ್ಯದ ಅಶೋಕ್ ಎಡಮಲೆ ಅವರನ್ನು ನೇಮಕ ಮಾಡಲಾಗಿದೆ.
ಜ.23ರಂದು ಬೆಂಗಳೂರಿನಲ್ಲಿ ಆಮ್ಆದಿ ಪಾರ್ಟಿ ರಾಜ್ಯ ಉಸ್ತುವಾರಿಯಾಗಿರುವ ದೆಹಲಿ ಶಾಸಕ ದಿಲೀಪ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ. ಅಶೋಕ್ ಎಡಮಲೆಯವರು ಹಿಂದೆ ಸುಳ್ಯ ವಿಧಾನಸಭಾ ಕ್ಷೇತ್ರದ ಎ.ಎ.ಪಿ. ಅಧ್ಯಕ್ಷರಾಗಿ, ಎಎಪಿ ರಾಜ್ಯ ಪದಾಧಿಕಾರಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಇವರು ಐವರ್ನಾಡು ಗ್ರಾಮದ ದಿ| ಎಡಮಲೆ ಕೇಶವ ಗೌಡರ ಪುತ್ರ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರು ವಿಪ್ರೋ ಕಂಪನಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ, ರಾಜೀನಾಮೆ ನೀಡಿ ಪ್ರಗತಿಪರ ಕೃಷಿಕರಾಗಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.