
ಮಿತ್ರ ಯುವಕಮಂಡಲ (ರಿ) ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ದುಗ್ಗಲಡ್ಕದಲ್ಲಿ ನಡೆದ ಮಿತ್ರ ಕುರಲ್ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಉದ್ಯಮಿ ಕೊಡುಗೈ ದಾನಿ ನಂದಕುಮಾರ್ ಹೆಚ್ಎಂ ರವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಜಂಟಿ ಸಂಘಗಳ ಸಂಚಾಲಕ ಡಾ.ಕೆ ಟಿ ವಿಶ್ವನಾಥ್ ಯುವಕ ಮಂಡಲ ಅಧ್ಯಕ್ಷ ಚೇತನ್ ಕಲ್ಮಡ್ಕ, ಕುರಲ್ ತುಳು ಕೂಟ ಅಧ್ಯಕ್ಷೇ ಶ್ರೀಮತಿ ನವ್ಯ ದಿನೇಶ್ ಸಂಘದ ಪದಾಧಿಕಾರಿಗಳಾದ ಕೃಷ್ಣಸ್ವಾಮಿ ಕಂದಡ್ಕ, ಭವಾನಿ ಶಂಕರ್ ಕಲ್ಮಡ್ಕ, ರಮೇಶ್ ನೀರಬಿದಿರೆ, ಕೆ ಟಿ ಭಾಗೀಶ್, ಧನಂಜಯ ಕಲ್ಮಡ್ಕ, ಚಿದಾನಂದ ಕೊಯಿಕುಳಿ, ದಿನೇಶ್ ಕೊಯಿಕುಳಿ, ಪ್ರದೀಪ್ ಕೊಯಿಕುಳಿ ಮೊದಲಾದವರು ಉಪಸ್ಥಿತರಿದ್ದರು.