Ad Widget

ಕವನ : ಬದುಕಿನಲ್ಲಿ ತಾಳ್ಮೆಯಿರಲಿ, ಗೆಲ್ಲುವ ವಿಶ್ವಾಸವಿರಲಿ…

ನಾವು ಬದುಕಲೇಬೇಕು ನಮ್ಮೊಂದಿಗೆ ಯಾರಿದ್ದರೂ, ಯಾರಿಲ್ಲದಿದ್ದರೂ…ನಾವು ಮುನ್ನಡೆಯಲೇಬೇಕು ನಮ್ಮ ಬದುಕಿನಲ್ಲಿ ಎಷ್ಟೇ ಕಷ್ಟವಿದ್ದರೂ, ನೋವಿದ್ದರೂ…ನಮ್ಮ ಬದುಕಿನಲ್ಲಿ ಎಷ್ಟೇ ಕಷ್ಟವಿರಬಹುದು, ಎಷ್ಟೇ ನೋವಿರಬಹುದು, ಆದರೆ ಒಂದು ಸಮಯ ಬಂದೇ ಬರುತ್ತದೆ, ಆ ಸಮಯ ನಮ್ಮ ಬದುಕಿನ ನೋವುಗಳನ್ನೆಲ್ಲಾ ಮರೆಸುತ್ತದೆ, ಕಷ್ಟಗಳನ್ನೆಲ್ಲಾ ದೂರಮಾಡುತ್ತದೆ, ನಾವು ಪಟ್ಟ ಪರಿಶ್ರಮಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ…ಜೀವನದಲ್ಲಿ ಸೋತರೂ ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿರಲಿ, ಸವಾಲುಗಳನ್ನು...

ದುಗ್ಗಲಡ್ಕ : ಮಿತ್ರ ಕುರಲ್ ಸಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಹೆಚ್ ಎಂ ನಂದಕುಮಾರ್ ರವರಿಗೆ ಸನ್ಮಾನ

ಮಿತ್ರ ಯುವಕಮಂಡಲ (ರಿ) ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ದುಗ್ಗಲಡ್ಕದಲ್ಲಿ ನಡೆದ ಮಿತ್ರ ಕುರಲ್ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಉದ್ಯಮಿ ಕೊಡುಗೈ ದಾನಿ ನಂದಕುಮಾರ್ ಹೆಚ್ಎಂ ರವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ...
Ad Widget

ಕೊಯ್ಕುಳಿ : ಪ್ರತಿಭಾ ದಿನೋತ್ಸವ

ಕೊಯಿಕುಳಿ ಕಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ದಿನೋತ್ಸವ ಕಾರ್ಯಕ್ರಮ ಜ.28 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಬಾಲಕೃಷ್ಣ ನಾಯರ್ ನೀರಬಿದಿರೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಶೀಲಾವತಿ, ಶ್ರೀಮತಿ ವಾರಿಜ ಕೊರಗಪ್ಪ ಗೌಡ, ಗಂಗಾಧರ ನೀರಬಿದಿರೆ, ಮಾಧವ ದುಗ್ಗಲಡ್ಕ , ಮುಖ್ಯಶಿಕ್ಷಕ ಮಾಧವ ಮೂಕಮಲೆ , ಶಿಕ್ಷಕಿ ಚಂದ್ರಕಲಾ ಕೆ ಸಿ ಉಪಸ್ಥಿತರಿದ್ದರು. ಎಲ್ಲಾ ಪೋಷಕರು ಹಾಗೂ...

ಕಡೆಪಾಲ : ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಬಿಡುಗಡೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಧೈವಸ್ಥಾನ ಕಡೆಪಾಲ ಇದರ ವಾರ್ಷಿಕ ನೇಮೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಯು. ಬಿ ಚಕ್ರಪಾಣಿ ಮತ್ತು ಬಿ.ಆರ್. ಪದ್ಮಯ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಆಡಳಿತ ಮೊಕ್ತೇಸರ ಕೆ ಎಚ್ ಪದ್ಮನಾಭ, ಅಧ್ಯಕ್ಷ ಬಾಲಕೃಷ್ಣ ಕಡೆಪಾಲ, ಹೇಮನಾಥ ಕಡೆಪಾಲ, ಹೊನ್ನಪ್ಪ ದಂಡೇಕಜೆ, ಕೊರಗ ಕಡೆಪಾಲ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

ಅರಂತೋಡು : ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ

ಅರಂತೋಡು ಗ್ರಾಮ ಪಂಚಾಯಿತ್ ವತಿಯಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರಂತೆ ಜ.29 ರಂದು ಅಭಿಯಾನ ನಡೆಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಪ್ರಕೃತಿ ವಿಕೋಪ ನಿರ್ವಹಣೆ ತಂಡ, ಯುವ ಬ್ರಿಗೇಡ್ ‌ ಅರಂತೋಡು ಮತ್ತು ನೆಹರು ಮೆಮೋರಿಯಲ್ ಕಾಲೇಜಿನ ಬಿ ಎಸ್ ಡಬ್ಲ್ಯೂ...
error: Content is protected !!