
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ ದಿನಾಂಕ 26.01.2023ನೇ ಗುರುವಾರ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮತ್ತು ಪ್ರತಿಭಾದಿನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 74ನೇ ಗಣರಾಜ್ಯೋತ್ಸವದ ಧ್ವಜಾರೋಹಣಹವನ್ನು ನಮ್ಮ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಶರೀಫ್ ನೆರವೇರಿಸಿದರು ಮಕ್ಕಳಿಂದ ಪಥ ಸಂಚಲನವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಶ್ರೀಯುತ ಲೋಕನಾಥ್ ರೈ ಪಟ್ಟೆ, ರಘುನಾಥ ರೈ ಅಲೆಂಗರ್, ಮಾಯಿಲಪ್ಪ ಗೌಡ, ನಿವೃತ್ತ ಮುಖ್ಯ ಗುರುಗಳಾದ ಸೀತಾರಾಮ, ಎಂ ಬಿ ಪೆರುವಾಜೆಯ ಶಾಲೆ ಮುಖ್ಯ ಶಿಕ್ಷಕರಾದ ತೇಜಪ್ಪ, ನಿವೃತ್ತ ಮುಖ್ಯ ಗುರುಗಳಾದ ಬಾಲಕೃಷ್ಣ ಹೇಮಾಳ, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರದ ಸರೋಜಿನಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ರೈ , ವಾಣಿ ಟೆಕ್ಸ್ಟ್ ಟೈಲ್ಸ್ ಕಾಂಪ್ಲೆಕ್ಸ್ ಮಾಲೀಕರು ವೀಣಾ ಕರಣಾಕರ, ಎಸ್ ಡಿ ಎಂ ಸಿ ಅಧ್ಯಕ್ಷರು ಅಬ್ದುಲ್ ಶರೀಫ್ , ಉಪಾಧ್ಯಕ್ಷರಾದ ಶ್ರೀಮತಿ ಸುನೀತಾ ಪಿ, ಎಡಮಂಗಲ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಗೀತಾ ಪ್ರವೀಣ್, ಸಭೆಯ ಅಧ್ಯಕ್ಷರಾದ ಎಡಮಂಗಲ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಶ್ರೀಮತಿ ರೇವತಿ ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಭುವನೇಶ್ವರಿ ಕೆ ಉಪಸ್ಥಿತರಿದ್ದರು.
ಪ್ರತಿಭಾ ದಿನೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳು ಮತ್ತು ಕ್ರೀಡೋತ್ಸವದಲ್ಲಿ ವಿಜೇತರಾದ ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಬಹುಮಾನವನ್ನು ವಿತರಿಸಲಾಯಿತು. ದತ್ತಿ ನಿಧಿ ವಿತರಣೆ ಮತ್ತು 2022-2023 ನೇ ಸಾಲಿನ ಶಾಲೆಗೆ ಕೊಡುಗೆ ನೀಡಿದ ಧಾನಿಗಳನ್ನು ಗುರುತಿಸಿ ಸ್ಮರಣೆಕೆಯನ್ನು ನೀಡಲಾಯಿತು. ಸಭ ಕಾರ್ಯಕ್ರಮದ ನಂತರ ಅಪರಾಹ್ನ ಎರಡು ಗಂಟೆಯಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಗುರುಗಳು ಎಲ್ಲರನ್ನೂ ಸ್ವಾಗತಿಸಿ ಸಹ ಶಿಕ್ಷಕಿ ಗುಲಾಬಿ ಕೆ ಎಲ್ಲರನ್ನು ವಂದಿಸಿದರು ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಕಾಶಿಮಠದ ಹಾಲಸ್ವಾಮಿ ನೆರವೇರಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಶ್ರೀಮತಿ ಸುರೇಖಾ ಇವರು ನೆರವೇರಿಸಿದರು