
ನೆಹರೂ ಮೆಮೋರಿಯಲ್ ಕಾಲೇಜು ಕುರುಂಜಿಭಾಗ್ ಸುಳ್ಯ ಇಲ್ಲಿನ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಭಾಗದ ವತಿಯಿಂದ 28ರಂದು ಆಕಾಶ ಕಾಯದಲ್ಲಿ ಕಪ್ಪು ರಂಧ್ರದ ಕುರಿತು ಅತಿಥಿ ಉಪನ್ಯಾಸವು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ ರುದ್ರಕುಮಾರ್.ಎಮ್.ಎಮ್ ಪ್ರಾಂಶುಪಾಲರು ಎನ್.ಎಮ್.ಸಿ ಸುಳ್ಯ ಇವರು ವಹಿಸಿದ್ದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಮ್.ಬಾಲಚಂದ್ರ ಗೌಡ ಇವರ ಮೊಮ್ಮಗನಾದ ವಿಹಾನ್ ದೊರೆ ಅತಿಥಿ ಉಪನ್ಯಾಸ ನೀಡಿದರು. ಅತೀ ಎಳೆಯ ವಯಸ್ಸಿನಲ್ಲಿ ಕಪ್ಪುರಂಧ್ರದ ಕುರಿತು ಅನ್ವೇಷಣೆ ಮಾಡಿ ತಿಳಿದುಕೊಂಡ ವಿಹಾನ್ ಇದು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಕುರಿತಾಗಿ ವಿವರಿಸಿ, ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸತ್ಯಪ್ರಕಾಶ್.ಡಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಸ್ವಾಗತಿಸಿ, ಉಷ.ಎಮ್.ಪಿ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರು ಧನ್ಯವಾದವನ್ನು ಸಮರ್ಪಿಸಿದರು. ಎಲ್ಲಾ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.