Ad Widget

ಎನ್ ಎಂ‌‌ ಸಿ: ಇನ್ವೆಸ್ಟರ್ಸ್ ಅವಾರ್ನೆಸ್ ಕಾರ್ಯಾಗಾರ


ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು ಸುಳ್ಯದ ಕಾಮರ್ಸ್ ಡಿಪಾರ್ಟ್‌ಮೆಂಟ್ ಮತ್ತು ಅಸೋಸಿಯೇಶನ್ ವತಿಯಿಂದ ‘ಇನ್ವೆಸ್ಟರ್‍ಸ್ ಅವಾರ್ನೆಸ್’ನ ಬಗ್ಗೆ ಒಂದು ದಿನದ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ . ಜ.23ರಂದು ನಡೆಯಿತು. ಕಾರ್ಯಾಗಾರವನ್ನು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಬಾಲಚಂದ್ರ ಗೌಡರವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ.ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿಯಾದ ಶ್ರೀಮತಿ ಮಮತಾ ಕೆ, ವಾಣಿಜ್ಯ ವಿಭಾಗದ ಉಪನ್ಯಾಸಕರುಗಳಾದ ಶ್ರೀ ಶ್ರೀಧರ್ ವಿ, ಶ್ರೀಮತಿ ಗೀತಾ ಶೆಣೈ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ದಿವ್ಯಾ ಟಿ.ಎಸ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಯುತ ನವೀನ್ ರೇಗೋ, ‘ಫಿನಾಂಶ್ಷಿಯಲ್ ಲಿಟರಸಿ’, ಲಿಯೋ ಅಮಲ್ ಅವರು ‘ಟೈಮ್ ವ್ಯಾಲ್ಯೂ ಆಫ್ ಮನಿ’ ಹಾಗೂ ಎಲ್‌ಸ್ಟೋನ್ ನೀಲ್ ಮೆನೆಸೆಸ್ ರವರು ‘ಪರ್ಸನಲ್ ಇನ್‌ವೆಸ್ಟ್‌ಮೆಂಟ್’ ಬಗ್ಗೆ ಮೂರು ಅವಧಿಗಳಲ್ಲಿ ಉಪನ್ಯಾಸ ನೀಡಿದರು. ಅಂತಿಮ ಬಿ.ಕಾಂ ಪದವಿಯ ವಿದ್ಯಾರ್ಥಿನಿಗಳಾದ ಕು. ಅನಘಾ ಪ್ರಾರ್ಥಿಸಿ, ಕು. ಅಜ್ಮಿನಾ ಸ್ವಾಗತಿಸಿ, ಕು. ಲಿಮಿತಾ ವಂದಿಸಿದರು. ಕು. ಶಾನ್ಯ ಕಾರ್ಯಕ್ರಮ ನಿರೂಪಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!