
ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಮಹಾಶಿವರಾತ್ರಿ ಮಹೋತ್ಸವವು ಫೆ.18 ನೇ ಶನಿವಾರದಂದು ನಡೆಯಲಿದೆ.
ಫೆ.18 ರಂದು ಪೂರ್ವಾಹ್ನ ಘಂಟೆ 9.30ಕ್ಕೆ ಧ್ವಹರೋಹಣ, ಕ್ರೀಡಾಕೂಟ (ಸ್ಥಳೀಯರಿಗೆ), ಮಧ್ಯಾಹ್ನ ಘಂಟೆ 12.00ಕ್ಕೆ ಗಣಪತಿ ಅಥರ್ವ ಶೀರ್ಷ ಅಭಿಷೇಕ ಮತ್ತು ನಿತ್ಯ ಪೂಜಾ ಕಾರ್ಯಕ್ರಮ, ಸಾಯಂಕಾಲ ಘಂಟೆ 6.38ಕ್ಕೆ ದೀಪಾರಾಧನೆ, ಸಾಯಂಕಾಲ ಘಂಟೆ 7.00ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ಘಂಟೆ 9.30ರಿಂದ ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ ಪ್ರಾರಂಭ, ರಾತ್ರಿ ಘಂಟೆ 12.30ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ಘಂಟೆ 1.00 ರಿಂದ ಬೆಳಿಗ್ಗೆ 6.00ರ ತನಕ ವಸಂತ ಆಚಾರ್ಯ ಸಾರಥ್ಯದ ಫ್ಯೂಶನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇದರ ಕೊಯನಾಡು ಮತ್ತು ಹರಿಹರ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಬಲೆ ತೆಲಿಪಾಲೆ ತಂಡದವರಿಂದ ಕುಸಲ್ದ ಕುರ್ಲರಿ ಹಾಸ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದ ಬಾಲಕೃಷ್ಣ ನೆಟ್ಟಾರು ಇವರಿಂದ ಸುಮಧುರ ಗಾಯನ ಪ್ರದರ್ಶನಗೊಳ್ಳಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಪಿ.ಡಿ. ವಿಶ್ವನಾಥ್ ತಿಳಿಸಿದ್ದಾರೆ.