ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ದೇವಚಳ್ಳ ಹಾಗೂ ದ.ಕ. ಜಿಲ್ಲಾ ಅನುಷ್ಠಾನ ಬೆಂಬಲ ಸಂಸ್ಥೆಗಳಾದ ಸಮುದಾಯ ಮಂಗಳೂರು ಮತ್ತು ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ವಿಶೇಷ ಗ್ರಾಮ ಸಭೆ, ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಸೌಲಭ್ಯವನ್ನು ಹೊಂದಲು ಪ್ರೇರೇಪಿಸುವ ಕಾರ್ಯಗಾರ, ಕಿರುಚಿತ್ರ ಪ್ರದರ್ಶನ, ಸ್ವಸಹಾಯ ಸಂಘಗಳ ಜಾಥಾ, ಮಹಿಳಾ ದೌರ್ಜನ್ಯ ವಿರೋಧಿ ಜಾಥಾ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವ್ರದ್ಧಿ ಅಧಿಕಾರಿ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಾ ದೇವ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ನ ಎನ್.ಆರ್.ಎಲ್.ಎಂ ತಾಲೂಕು ಸಂಯೋಜಕರಾದ ಶ್ವೇತಾ ರವರು ಸರ್ಕಾರದಿಂದ ಮಹಿಳೆಯರ ಅಭಿವೃದ್ಧಿಗಾಗಿ ಇರುವ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಲ ಜೀವನ್ ಮಿಷನ್ ನ ಸಂಯೋಜಕ ಸುರೇಶ್ ರವರು ಜಲ ಜೀವನ್ ಮಿಷನ್ ಕಾರ್ಯಚಟುವಟಿಕೆಗಳು, ಸ್ವಚ್ಛ ಭಾರತ್ ಮಿಷನ್ ಯೋಜನೆ, ಮಳೆ ನೀರು ಕೊಯ್ಲು ಘಟಕ ಮತ್ತು ಬೂದು ನೀರು ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಕಿರು ಚಿತ್ರ ಪ್ರದರ್ಶಿಸಲಾಯಿತು. ನಂತರ ಸ್ವಸಹಾಯ ಸಂಘಗಳ ಜಾಥಾ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಜಾಥಾ ನಡೆಸಲಾಯಿತು. ಜಲಜೀವನ್ ಮಿಷನ್ ಅನುಷ್ಠಾನ ಬೆಂಬಲ ಸಂಸ್ಥೆ ಸಿಬ್ಬಂದಿಗಳಾದ ಅಭಿಲಾಷ್ ಮತ್ತು ಘೋಷಿತ್ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024