
ಅಡ್ಕಾರು ಮನೆ ಜಾಲ್ಸೂರು ಬಾಲಾಜೆಯಲ್ಲಿ ಜ.26 ರಂದು ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ ನಂತರ ತಂಬಿಲ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆಯುವುದು, ತೊಡೆಂಗೇಲು(ಎಣ್ಣೆ ಬೂಳ್ಯೆ), ರಾತ್ರಿ ಅನ್ನಸಂತರ್ಪಣೆ ನಡೆಯಿತು.
ನಂತರ ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆದು ಪ್ರಸಾದ ವಿತರಣೆಯೊಂದಿಗೆ ನೇಮೋತ್ಸವವು ಸಂಪನ್ನಗೊಂಡಿತು.
(ವರದಿ : ಉಲ್ಲಾಸ್ ಕಜ್ಜೋಡಿ)