
ಅಚ್ರಪ್ಪಾಡಿ ಸ.ಕಿ.ಪ್ರಾ.ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ ವಿಜ್ರಂಭಣೆಯಿಂದ ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಜನಾರ್ಧನ ರವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವನ್ನು ಸಮರ್ಪಿಸುವ ಮೂಲಕ ಉದ್ಘಾಟಿಸಿದರು. ರಾಷ್ಟ್ರಧ್ವಜ ಹಾರಿಸುವುದರೊಂದಿಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆ ಹಿತರಕ್ಷಣಾ ವೇದಿಕೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಬು ಗೌಡ ಅಚ್ರಪಾಡಿ, ಹಿತರಕ್ಷಣಾ ವೇದಿಕೆಯನ್ನು ಅಧ್ಯಕ್ಷರಾದ ವಸಂತ ವಸಂತ ಗೌಡ ಬೊಳ್ಳಾಜೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಖಿಲ್, ಉಪಾಧ್ಯಕ್ಷ ರಮೇಶ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಕುಮುದ, ರಾಷ್ಟ್ರ ಪ್ರಶಸ್ತಿ ವಿಜೇತ ಯೋಧ ಚಂದ್ರಶೇಖರ ಅಚ್ರಪ್ಪಾಡಿ, ಶಾಲಾ ಹಿತೈಷಿ ದಾಮೋದರ ಗೌಡ ಹಾಗೂ ಶಾಲೆಯ ಎಡಿಎಂಸಿ ಸದಸ್ಯರು ಪೋಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲೆಯಲ್ಲಿ ಮಕ್ಕಳಿಂದ ಆಕರ್ಷಕ ಪಥಸಂಚಲನ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಕ್ರೀಡೋತ್ಸವದ ವಿಜೇತ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಅತಿಥಿಗಳಿಂದ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ಸ್ವಾಗತಿಸಿ, ಶ್ರೀಮತಿ ಜಾನ್ಸಿ ವಂದಿಸಿದರು. ಕು.ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.