- Thursday
- November 21st, 2024
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ದೇವಚಳ್ಳ ಹಾಗೂ ದ.ಕ. ಜಿಲ್ಲಾ ಅನುಷ್ಠಾನ ಬೆಂಬಲ ಸಂಸ್ಥೆಗಳಾದ ಸಮುದಾಯ ಮಂಗಳೂರು ಮತ್ತು ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ವಿಶೇಷ ಗ್ರಾಮ...
ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಮಹಾಶಿವರಾತ್ರಿ ಮಹೋತ್ಸವವು ಫೆ.18 ನೇ ಶನಿವಾರದಂದು ನಡೆಯಲಿದೆ.ಫೆ.18 ರಂದು ಪೂರ್ವಾಹ್ನ ಘಂಟೆ 9.30ಕ್ಕೆ ಧ್ವಹರೋಹಣ, ಕ್ರೀಡಾಕೂಟ (ಸ್ಥಳೀಯರಿಗೆ), ಮಧ್ಯಾಹ್ನ ಘಂಟೆ 12.00ಕ್ಕೆ ಗಣಪತಿ ಅಥರ್ವ ಶೀರ್ಷ ಅಭಿಷೇಕ ಮತ್ತು ನಿತ್ಯ ಪೂಜಾ ಕಾರ್ಯಕ್ರಮ, ಸಾಯಂಕಾಲ ಘಂಟೆ 6.38ಕ್ಕೆ ದೀಪಾರಾಧನೆ, ಸಾಯಂಕಾಲ ಘಂಟೆ 7.00ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ಘಂಟೆ...
ಮಂಡೆಕೋಲು ಗ್ರಾಮದ ಕುಕ್ಕೇಟಿ ದಿ. ಕೂಸಪ್ಪ ಗೌಡರ ಪತ್ನಿ ಚಿನ್ನಮ್ಮ(76) ಎಂಬವರು ಜ. 27ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರರಾದ ದೇವಯ್ಯ ಗೌಡ, ಪೂವಯ್ಯ, ರಾಘವ, ರಾಮಚಂದ್ರ, ಪುತ್ರಿಯರಾದ ಪುಷ್ಪಾವತಿ ಬಾಲಕೃಷ್ಣ, ಮಮತಾ ಲಿಂಗಪ್ಪ, ಚಿತ್ರಲೇಖ ಆನಂದ, ಸೊಸೆಯಂದಿರಾದ ಸುಶೀಲಾ, ಭವಾನಿ, ಜಯಂತಿ, ಹರಿಣಾಕ್ಷಿ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಕುಟುಂಬಸ್ಥರು ಮತ್ತು ಬಂಧುಗಳನ್ನು...
ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು.ಧ್ವಜಾರೋಹಣ ವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಜತೆ ಕಾರ್ಯದರ್ಶಿ ಶ್ಯಾಮ್ ಕುಮಾರ್ ಎಂ.ಎಸ್ ನೆರವೇರಿಸಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ, ಶಿಕ್ಷಕರಾದ ಜಯಲತಾ ಕೆ.ಆರ್, ಮೀನಕುಮಾರಿ.ಕೆ, ಶಿವಪ್ರಕಾಶ್. ಕೆ, ಸವಿತಾಕುಮಾರಿ, ಕುಮಾರ್ ಲಮಾಣಿ, ಸಿಬ್ಬಂದಿ ಬೇಬಿ.ಕೆ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ.ಕೆ...
ಅಡ್ಕಾರು ಮನೆ ಜಾಲ್ಸೂರು ಬಾಲಾಜೆಯಲ್ಲಿ ಜ.26 ರಂದು ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ ನಂತರ ತಂಬಿಲ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆಯುವುದು, ತೊಡೆಂಗೇಲು(ಎಣ್ಣೆ ಬೂಳ್ಯೆ), ರಾತ್ರಿ ಅನ್ನಸಂತರ್ಪಣೆ ನಡೆಯಿತು.ನಂತರ ಶ್ರೀ ಧೂಮಾವತಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆದು ಪ್ರಸಾದ ವಿತರಣೆಯೊಂದಿಗೆ ನೇಮೋತ್ಸವವು ಸಂಪನ್ನಗೊಂಡಿತು.(ವರದಿ : ಉಲ್ಲಾಸ್...
ಅಚ್ರಪ್ಪಾಡಿ ಸ.ಕಿ.ಪ್ರಾ.ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ ವಿಜ್ರಂಭಣೆಯಿಂದ ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಜನಾರ್ಧನ ರವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವನ್ನು ಸಮರ್ಪಿಸುವ ಮೂಲಕ ಉದ್ಘಾಟಿಸಿದರು. ರಾಷ್ಟ್ರಧ್ವಜ ಹಾರಿಸುವುದರೊಂದಿಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆ ಹಿತರಕ್ಷಣಾ ವೇದಿಕೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಬು ಗೌಡ ಅಚ್ರಪಾಡಿ, ಹಿತರಕ್ಷಣಾ ವೇದಿಕೆಯನ್ನು ಅಧ್ಯಕ್ಷರಾದ ವಸಂತ ವಸಂತ...
ರಿಕ್ಷಾ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಕ್ಷಾ ಚಾಲಕ ಮಂಡೆಕೋಲಿನ ಕನ್ಯಾನದ ರಾಜೇಶ್ ಎಂಬವರು ಮೃತಪಟ್ಟ ಘಟನೆ ವರದಿಯಾಗಿದೆ.ಜ.21 ರಂದು ಸಂಜೆ ರಾಜೇಶರು ಮನೆ ಸಮೀಪ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಯಿತು. ಪರಿಣಾಮ ರಾಜೇಶರ ತಲೆಗೆ ಗಂಭೀರ ಗಾಯವಾಗಿತ್ತು. ಮನೆಯವರು ಅವರನ್ನು ಸುಳ್ಯ ಆಸ್ಪತ್ರೆಗೆ...
ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಅಜ್ಜಾವರ ಗ್ರಾಮದ ಪಡ್ಡಂಬೈಲು ಸಮೀಪದ ನಾಂಗುಳಿ ಎಂಬಲ್ಲಿ ನಡೆದಿದೆ. ಶರತ್ ಎಂಬವರ ಪತ್ನಿ ಮಲ್ಲಿಕಾ (26) ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಮಲ್ಲಿಕಾರವರು ಕೆ.ವಿ.ಜಿ. ಆಯುರ್ವೇದಿಕ್ ನಲ್ಲಿ ಉದ್ಯೋಗಿಯಾಗಿದ್ದರು. ಇಂದು ರಜೆ ಹಿನ್ನಲೆ ಮಲ್ಲಿಕಾ ಮನೆಯಲ್ಲಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಕೊಂಡು...