ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವವು ಜ.31ರಿಂದ ಫೆ.9ರ ತನಕ ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ದೇವಸ್ಥಾನದಲ್ಲಿ ನಡೆಯುವ ವೈದಿಕ ಕಾರ್ಯಕ್ರಮ ಜ.31ನೇ ಸಂಜೆ ಗಂಟೆ 6-00ರಿಂದ ದೇವತಾಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಪ್ರಾಸಾದ ಶುದ್ದಿ, ಅಂಕುರಾರೋಪಣ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ನಡೆಯಲಿದೆ. ಫೆ.1ರಂದು ಬೆಳಿಗ್ಗೆ ಗಂಟೆ 5-00ರಿಂದ ಗಣಪತಿಹೋಮ, ಪ್ರಾಯಶ್ಚಿತ್ತ ಹೋಮಗಳು, ಚತುಃಶುದ್ಧಿ, ಧಾರ, ಅವಗಾಹ, ಪಂಚಕ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6-00ರಿಂದ ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ.
ಫೆ.2ರಂದು ಬೆಳಿಗ್ಗೆ ಗಂಟೆ 5-30ರಿಂದ ಗಣಪತಿ ಹೋಮ, ಶಾಂತಿ, ಸ್ವಶಾಂತಿ, ಅದ್ಭುತಶಾಂತಿ, ಚೋರಶಾಂತಿ ಹೋಮಗಳು, ದಹನ ಪ್ರಾಯಶ್ಚಿತ್ತ, ಅಂಕುರಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6.00ರಿಂದ ಹೋಮಕಲಶಾಭಿಷೇಕ, ಅಂಕುರ ಪೂಜೆ, ತ್ರಿಕಾಲಪೂಜೆ, ಅನುಜ್ಞಾಕಲಶ ಪೂಜೆ, ಅಧಿವಾಸಹೋಮ, ಕಲಶಾಧಿವಾಸ, ಮಹಾಪೂಜೆ ನಡೆಯಲಿದೆ. ಫೆ.03ರಂದು ಬೆಳಿಗ್ಗೆ ಗಂಟೆ 5-30ರಿಂದ ಗಣಪತಿಹೋಮ, ತತ್ತ್ವಕಲಶ, ತತ್ತ್ವಹೋಮ, ಅನುಜ್ಞಾಕಲಶಾಭಿಷೇಕ, ಅಂಕುರ ಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6.30ರಿಂದ ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾಪ್ರಾರ್ಥನೆ, ಅಂಕುರ ಪೂಜೆ, ತ್ರಿಕಾಲ ಪೂಜೆ, ಬಿಂಬಶುದ್ಧಿ ಕಲಶಪೂಜೆ, ಮಹಾಪೂಜೆ ನಡೆಯಲಿದೆ. ಫೆ. 4ರಂದು ಬೆಳಿಗ್ಗೆ ಗಂಟೆ 6.00ರಿಂದ ಗಣಪತಿಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾ ಪೂಜೆ, ತತ್ವಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ ತಯ್ಯೋನ್ನಯನ, ಅಂಕುರ ಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6.00ರಿಂದ ಬಿಂಬಶುದ್ಧಿ, ಕಲಶಾಭಿಷೇಕ, ಪೀಠಾಧಿವಾಸ, ಧ್ಯಾನಾಧಿವಾಸ, ಅಧಿವಾಸ ಹೋಮ, ಅಧಿವಾಸಬಲಿ, ತ್ರಿಕಾಲ ಪೂಜೆ, ಶಿರಸ್ತತ್ವ ಹೋಮ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ.5ರಂದು ಬೆಳಿಗ್ಗೆ ಗಂಟೆ 4.00ರಿಂದ 108 ತೆಂಗಿನಕಾಯಿಯ ಗಣಪತಿಹೋಮ, ಪ್ರತಿಷ್ಠಾಪಾಣಿ ಗಂಟೆ 9-10ರಿಂದ 9-54ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6-00ರಿಂದ
ನಿತ್ಯನೈಮಿತಾದಿಗಳ ನಿರ್ಣಯ, ಭದ್ರ ದೀಪವಿಟ್ಟು ಕವಾಟ ಬಂಧನ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಲಿದೆ. ಫೆ.6ರಂದು ಬೆಳಿಗ್ಗೆ ಗಂಟೆ 5-30ರಿಂದ ಗಣಪತಿಹೋಮ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಸಪ್ತ ಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ, ಸೋಪಾನ ಪೂಜೆ, ಪ್ರಸಾದ ವಿತರಣೆ, ಅನ್ನಸಂಪರ್ತಣೆ, ಸಂಜೆ ಗಂಟೆ 7-00ರಿಂದ ಅಂಕುರ ಪೂಜೆ, ಸೋಪಾನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಫೆ.7ರಂದು ಬೆಳಿಗ್ಗೆ ಗಂಟೆ 5.30ರಿಂದ ಗಣಪತಿಹೋಮ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶ, ಕುಂಭೇಶ ಕರ್ಕರಿ ಪೂಜೆ, ಅಂಕುರ ಪೂಜೆ, ಮಂಟಪ ಸಂಸ್ಕಾರ, ಬ್ರಹ್ಮಕಲಶ ಪೂಜೆ, ಸೋಪಾನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಗಂಟೆ 5-30ರಿಂದ ಪರಿಕಲ ಪೂಜೆ, ಆಧಿವಾಸಹೋಮ, ಅಧಿವಾಸಬಲಿ, ಕಲಶಾಧಿವಾಸ ಸೋಪಾನ ಪೂಜೆ, ಮಹಾಬಲಿ, ಪೀಠಾಧಿವಾಸ, ಫೆ.8ರಂದು ಬೆಳಿಗ್ಗೆ ಗಂಟೆ 6-00ರಿಂದ ಗಣಪತಿಹೋಮ, ಕವಾಟೋದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ ಮತ್ತು ತತ್ವ ಹೋಮ, ಕಲಶಾಭಿಷೇಕ, 1008 ಬ್ರಹ್ಮಕಲಶಾಭಿಷೇಕ, ಅವಭೃತಪ್ರೋಕ್ಷಣೆ, ಮಹಾಪೂಜೆ, ಮಂಗಲಮಂತ್ರಾಕ್ಷತೆ, ಮಹಾ ಅನ್ನಸಂತರ್ಪಣೆ ರಾತ್ರಿ ಗಂಟೆ 9-00ರಿಂದ ಶ್ರೀದೇವರ ಭೂತಬಲಿ ಉತ್ಸವ, ಅನ್ನಸಂತರ್ಪಣೆ, ವಸಂತ ಕಟ್ಟೆ ಪೂಜೆ, ಫೆ.9ರಂದು ಬೆಳಿಗ್ಗೆ ಗಂಟೆ 9-30ರಿಂದ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಗಂಧ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಗಂಟೆ 7-00ರಿಂದ ರಂಗ ಪೂಜೆ, ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯಲಿದೆ.
ಜ.31 ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯದ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ. ಕೆ. ಉಮೇಶ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಪ್ರತಾಪ್ ಸಿಂಹ ನಾಯಕ್ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವು ಜ.೧ರಂದು ಸಂಜೆ ಹರಿಕಥೆ – ಭಕ್ತ ಸುಧಾಮ, ೨ರಂದು ಸಂಜೆ ಯಕ್ಷಗಾನ – ಸುದರ್ಶನ ಗರ್ವಭಂಗ, ಫೆ.೩ ರಂದು ನೃತ್ಯ ವೈವಿಧ್ಯ – ಪುಣ್ಯ ಭೂಮಿ ಭಾರತ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ರಾತ್ರಿ ಭಜನಾ ಕಾರ್ಯಕ್ರಮವು ನಡೆಯಲಿದೆ.
- Thursday
- November 21st, 2024