ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.3,4 ಮತ್ತು 5 ರಂದು ವಯನಾಟ್ ‘ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದ್ದು, ಈ ಉತ್ಸವದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಜ.23ರಂದು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ದೈವಕಟ್ಟು ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಜಿತೇಂದ್ರ ನಿಡ್ಯಮಲೆ ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೈವಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ, ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಆರ್ಥಿಕ ಸಮಿತಿ ಅಧ್ಯಕ್ಷ ಹಾಗೂ ಶ್ರೀ ಶಾಸ್ತಾವು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ, ಕಾರ್ಯಾಧ್ಯಕ್ಷರುಗಳಾದ ನಂಜಪ್ಪ ನಿಡ್ಯಮಲೆ, ಶ್ರೀಜಿತ್ ಅರಂತೋಡು, ಆಡಳಿತ ಸಮಿತಿ ಕಾರ್ಯದರ್ಶಿ ವಿಶ್ವನಾಥ ಮಜಿಕೋಡಿ, ಸಂಘಟನಾ ಕಾರ್ಯದರ್ಶಿ ಉದಯಚಂದ್ರ ಕುಂಬಳಚೇರಿ, ಕೋಶಾಧಿಕಾರಿ ಲೊಕೇಶ ಹೊದ್ದೆಟ್ಟಿ, ಕುಂಬಳಚೇರಿ ಸ್ಥಾನದ ಮನೆ ಅರ್ಚಕ ಕುಂಞಕಣ್ಣ, ಪ್ರಕಾಶ್ ದೊಡ್ಡಡ್ಕ, ಪ್ರಸನ್ನ ನೆಕ್ಕಿಲ,ಅನಿಲ್ ಕುಂಬಳಚೇರಿ, ಭುವನ ಕುಂಬಳಚೇರಿ, ಪ್ರವೀಣ್ ಮಜಿಕೋಡಿ, ಸುಮಿತ್ರ ಕುಂದಲ್ಪಾಡಿ, ಪ್ರಕಾಶ್ ಕೊಳಂಗಾಯ, ಪ್ರದೀಪ್ ಕುಂಬಳಚೇರಿ, ವಿಶ್ವನಾಥ್ ಕುಂಬಳಚೇರಿ, ತೇಜಕುಮಾರ್ ಅಮೆಚೂರು, ದೇವಪ್ಪ ಕುಂದಲ್ಪಾಡಿ, ಕೃಷ್ಣಪ್ಪ ಕೊಳಂಗಾಯ, ಪುರುಷೋತ್ತಮ ನಿಡ್ಯಮಲೆ,ಪ್ರದೀಪ್ ಅರಂತೋಡು, ಉಮೇಶ್ ಕುಂಬಳಚೇರಿ, ಆರ್ ಡಿ ಆನಂದ, ಚಿದಾನಂದ ಪೀಚೆ,ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Thursday
- November 21st, 2024