ಧರ್ಮಯೋಗಿ ಪ್ರೊಡಕ್ಷನ್ ಸಾರಥ್ಯ ದಲ್ಲಿ ಶ್ರೀ ಸುರೇಂದ್ರ ಮೋಹನ್ ಮುದ್ರಾಡಿ ಇವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಕರಾವಳಿ ಕರ್ನಾಟಕದ ವಿಶ್ವಾಸದ ಪ್ರತಿಬಿಂಬ ನಮ್ಮ ಕುಡ್ಲ ವಾಹಿನಿ ಮುಖೇನ ಮೂಡಿ ಬರುತ್ತಿರುವ ತುಳುನಾಡ ಬಂಗಾರ್ ಗರೋಡಿಲು ಸಾಕ್ಷ ಚಿತ್ರ ತಂಡ ಪ್ರಸ್ತುತ ಪಡಿಸುವ ಯುದ್ಧ ಭೂಮಿಯಲ್ಲಿ ನಡೆದ ಕೋಟಿ ಚೆನ್ನಯರ ಭಾವನಾತ್ಮಕ ಸನ್ನಿವೇಶದ ಸಿನಿದೃಶ್ಯ ಚಿತ್ರೀಕರಣದ ಮುಹೂರ್ತ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಆದಿ ಗರಡಿ ಎಣ್ಮೂರು ಜ. 21 ರಂದು ನೆರವೇರಿತು. ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿಯವರ ಅಮೃತ ಹಸ್ತದಿಂದ ಎಣ್ಮೂರ ಮಣ್ಣಿನ ಅವಳಿ ಕಾರ್ಣಿಕ ಶಕ್ತಿಗಳಿಗೆ ಗರಡಿ ಪೂಜಾ ಆರತಿ ಬೆಳಗುವುದರ ಮೂಲಕ ಭಕ್ತಿ ಪೂರ್ವಕವಾಗಿ ನೆರವೇರಿತು.* *ಶ್ರೀಧಾಮ ಮಾಣಿಲ ಕ್ಷೇತ್ರದ ಸ್ವಾಮೀಜಿಯವರು ಆಶೀರ್ವಚನ ನೀಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ರಶ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಗರಡಿ ಕ್ಷೇತ್ರದ ಬೆನ್ನೆಲುಬು, ಉದ್ಯಮಿ, ಧರ್ಮ ಯೋಗಿ ಪ್ರೊಡಕ್ಷನ್ ಚಿತ್ರದ ಪ್ರಾಯೋಜಕರು ಡಿ. ಆರ್. ರಾಜು, ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಗರಡಿ ಎಣ್ಮೂರು ಕ್ಷೇತ್ರದ ಅನುವಂಶಿಕ ಆಡಳಿತ ದಾರರಾದ ಶ್ರೀ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಎಣ್ಮೂರು ಗರಡಿಯ ಮಾಹಿತಿದಾರರಾದ ಏನ್.ಜಿ ಲೋಕನಾಥ್ ರೈ, ಶಿವದೂತೆ ಗುಳಿಗೆ ತುಳು ನಾಟಕ ಖ್ಯಾತಿಯ ನಟ ನಿತೀಶ್ ಪೂಜಾರಿ ಏಳಿಂಜೆ, ಉಪಸ್ಥಿತರಿದ್ದರು. ಧರ್ಮಯೋಗಿ ಸಂಸ್ಥೆಯ ಸಾರಥಿ, ಚಿತ್ರ ನಿರ್ದೇಶಕರು,ಹಾಗು ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಮನೆತನದ ಸುರೇಂದ್ರ ಮೋಹನ್ ಮುದ್ರಾಡಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಧರ್ಮಯೋಗಿ ಪ್ರೊಡಕ್ಷನ್ ನಿರ್ವಾಹಕಾರದ ಪವಿತ್ರ ಸುರೇಂದ್ರ ಮೋಹನ್, ನಿರೂಪಕಿಯಾರಾದ ರಮ್ಯಶ್ರೀ ನಡುಮನೆ, ರಚನಾ ಕೊಣಾಜೆ,ನವ್ಯ ಪುತ್ತೂರು ಶ್ರೀಮತಿ ರಾಧಿಕಾ ಪ್ರೀತಮ್ ಏನೆಕಲ್, ತಂಡದ ಕಲಾವಿದರಾದ ಪುಷ್ಪರಾಜ್ ಏನೆಕಲ್, ದೀಕ್ಷಿತ್ ಭಾರದ್ವಜ್, ಮಿಥುನ್ ಕುಮಾರ್ ಸೋನ, ಶಿವರಾಮ್ ಕಲ್ಮಡ್ಕ,ಮತ್ತು ಕುಕ್ಕೆ ಶ್ರೀ ಮಹಾವಿದ್ಯಾಲಯದ ಕುಸುಮ ಸಾರಂಗ ರಂಗ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು.
- Thursday
- November 21st, 2024