Ad Widget

ಪ್ರಾ.ಕೃ.ಪ.ಸ.ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮ, ಹಾಗೂ ಸಾಧಕರಿಗೆ ಸನ್ಮಾನ ವ್ಯಕ್ತಿತ್ವ ತುಂಬಿದ ವ್ಯಕ್ತಿಗಳಿಂದ ಒಳ್ಳೆಯ ಸಮಾಜ ಕಟ್ಟಲು ಸಾದ್ಯ – ಒಡಿಯೂರು ಶ್ರೀ

. . . . . . .

ವ್ಯಕ್ತಿತ್ವ ತುಂಬಿದ ವ್ಯಕ್ತಿಗಳಿಂದ ಒಳ್ಳೆಯ ಸಮಾಜ ಕಟ್ಟಲು ಸಾದ್ಯ ಎಂದುಒಡಿಯೂರು ಗುರದೇವದತ್ತ ಸಂಸ್ಥಾನ ಮಠದ ಸ್ವಾಮೀಜಿ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಶತ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶತ ಸಂಭ್ರಮ ಸಹಸ್ರ ಸಂಭ್ರಮಕ್ಕೆ ಮುನ್ನುಡಿಯಾಗಲಿ. ವ್ಯಕ್ತಿತ್ವ ತುಂಬಿರುವ ವ್ಯಕ್ತಿಯಿಂದ ಸಮಾಜ ಕಟ್ಟಬಹುದು ಎನ್ನುವುದಕ್ಕೆ ಸಹಕಾರಿ ಸಂಘ ಉತ್ತಮ ಉದಾಹರಣೆ ಎಂದರು.

ರಾಜ್ಯ ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್ .ಅಂಗಾರ ಭಾಗವಹಿಸಿ, ಸಂಪಾಜೆ ಸಹಕಾರಿ ಸಂಘದ ಸೇವೆಯಿಂದ ಹಲವಾರು ಮಂದಿ ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ,ಮೂಲ ವಿಚಾರಗಳನ್ನು,ಉದ್ದೇಶಗಳನ್ನು ನಡೆಸುತ್ತಾ ಹೋದರೆ ಒಂದು ಗುರಿಯನ್ನು ದಾಟಬಹುದು, ಶತಮಾನೋತ್ಸವ ಕಂಡ ಸಂಪಾಜೆ ಸಹಕಾರಿ ಸಂಘ ಇನ್ನಷ್ಟು ಅಭಿವೃದ್ದಿಯಾಗಲಿ ಎಂದರು.

ಕಲ್ಲುಗುಂಡಿ ಚರ್ಚ್ ಧರ್ಮಗುರು ರೆ. ಫಾ. ಪ್ಲಾವ್ ಕ್ರಾಸ್ತಾ ಮಾತನಾಡಿ ಆರ್ಥಿಕ ಪುನಶ್ಚೇತನಕ್ಕೆ,ಎಲ್ಲರಿಗೂ ಸಹಕಾರಿ ಸಂಘ ಉಪಯುಕ್ತವಾಗಿದೆ ಎಂದರು.

ಕಲ್ಲುಗುಂಡಿ ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬರಾದ ಅಹ್ಮದ್ ನಈಂ ಫೈಝಿ ಭಾಗವಹಿಸಿ ಮಾನವನ ಮೌಲ್ಯ ಸಹಕಾರವೂ ಒಂದು ಪ್ರಮುಖ ಭಾಗವಾಗಿದೆ ಎಂದು ಹೇಳಿದರು ,ಬೇಧವನ್ನು ಮರೆತು ಒಂದಾಗಿ ಬಾಳಲು ಸಹಕಾರಿ ಸಂಘ ಕಾರಣವಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ. ಎಮ್ .ಎನ್ .ರಾಜೇಂದ್ರ ಕುಮಾರ್ “ಸಹಕಾರಿ ಸಂಘವು ಅಮೋಘ ಸಾಧನೆಯನ್ನು ಮಾಡಿದೆ,ಜಾತಿ ಧರ್ಮವನ್ನು ಮೀರಿ ನಿಂತ ಸಂಸ್ಥೆ ಸಹಕಾರಿ ಸಂಘ ಎಂದು ಹೇಳಿದರು, ಸಹಕಾರಿ ಸಂಸ್ಥೆ ರೈತರನ್ನು ಬೆಳೆಸಿದೆ,ಎಲ್ಲರೂ ಒಗ್ಗಟ್ಟಿ ನಿಂದ ಸಹಕರಿಸುವಂತಾಗಬೇಕು ಎಂದು ಹೇಳಿದರು.

ರಾಜ್ಯ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ,ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, , ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಮಂಗಳೂರು ಸಹಕಾರಿ ಸಂಘದ ಉಪ ನಿಬಂಧಕ ರಮೇಶ್ ಎಚ್ ಎನ್, ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ವೀರೇಂದ್ರ ಜೈನ್ ,ಸೆಲ್ಕೋ ಸೋಲಾರ್ ಬೆಂಗಳೂರು ಇದರ ಸಿ ಇ ಒ ಮೋಹನ್ ಭಾಸ್ಕರ ಹೆಗಡೆ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಂಘದ ನಿರ್ದೇಶಕರಾದ ಗಣಪತಿ ಭಟ್, ಪಿ.ಎನ್ ಆನಂದ ಪಿ.ಎಲ್, ಉಷಾ ಕೆ.ಎಂ, ಸುಮತಿ ಎಸ್, ಜಗದೀಶ್ ರೈ ಕೆ.ಆರ್, ಯಮುನ ಬಿ.ಎಸ್, ಹಮೀದ್ .ಹೆಚ್ , ಜಾನಿ ಕೆ.ಪಿ. , ಚಂದ್ರಶೇಖರ ಕೆ.ಯು, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಒಡಿಯೂರು ಗುರುದೇವಾನಂದ ಸ್ವಾಮೀಜಿಗಳು,ರೆ.ಫಾ. ಪ್ಲಾವ್ ಕ್ರಾಸ್ತಾ,ಬಹು ಅಹ್ಮದ್ ನಈಂ,ಡಾ. ಎಮ್ .ಎನ್ ರಾಜೇಂದ್ರಕುಮಾರ್ ನೆರವೇರಿಸಿದರು. ಸಮಾರಂಭದ ಮೊದಲು ಕಲ್ಲುಗುಂಡಿ ಕೂಲಿ ಶೆಡ್ ನಿಂದ ಶತಮಾನೋತ್ಸವದ ಸಭಾಂಗಣದ ವರೆಗೆ ಅದ್ದೂರಿಯ ಮೆರವಣಿಗೆ ನಡೆಯಿತು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು ,ಸಂಘದ ಕಚೇರಿಯಲ್ಲಿ ದ್ವಜಾರೋಹಣವನ್ನು ಸಹಕಾರಿ ಯೂನಿಯನ್ ಮಂಗಳೂರಿನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಗಣ್ಯರು ಮತ್ತು ಸಂಪಾಜೆ ವ್ಯಾಪ್ತಿಗೆ ಒಳಪಟ್ಟ ವಿವಿಧ ಸಾಧಕರನ್ನ ಸನ್ಮಾನಿಸಿದರು.ಕ್ರೀಡಾಕೂಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪನೆಯನ್ನು ಕೆ. ಟಿ ವಿಶ್ವನಾಥ ಮಾಡಿದರು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಮಾರೋಪ ಸಮಾರಂಭ

ಜನರಿಗೆ ಆರ್ಥಿಕ ಶಕ್ತಿ ತುಂಬಿದ ಕಾರಣದಿಂದ ಸಹಕಾರಿ ಸಂಘಗಳು ಎತ್ತರಕ್ಕೆ ಬೆಳೆದಿದೆ – ರೇಣುಕಾ ಪ್ರಸಾದ್

ಕಷ್ಟಕಾಲದಲ್ಲಿ ಜನರ ಕೈ ಹಿಡಿದು ಆರ್ಥಿಕ ಶಕ್ತಿ ತುಂಬುವ ಕಾರಣ ಸಹಕಾರ ಕ್ಷೇತ್ರ ಇಷ್ಟು ಎತ್ತರಕ್ಕೆ ಬೆಳೆದಿದೆ. ಸಹಕಾರಿ ಕ್ಷೇತ್ರ ಬೆಳೆಯಲು ಹಿರಿಯರ ದೂರದೃಷ್ಟಿತ್ವವೇ ಕಾರಣ ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ ಹೇಳಿದ್ದಾರೆ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸಹಕಾರಿ ಸಂಘವೊಂದು ಶತಮಾನೋತ್ಸವ ಪೂರೈಸಿರುವುದು ಮತ್ತು ಶತಮಾನೋತ್ಸವವನ್ನು ಇನ್ನೊಂದು ಶತಮಾನಗಳ ಕಾಲ ನೆನಪಿಸುವಂತೆ ಆಚರಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ ‘ಸಮುದಾಯಕ್ಕೆ ಆರ್ಥಿಕವಾಗಿ ಶಕ್ತಿ ತುಂಬಿ ಸಹಕಾರಿ ಮತ್ತು ಸಾಮರಷ್ಯದ ಭಾವನೆಯಿಂದ ಬೆಳೆದು ಶತಮಾನವನ್ನು ಆಚರಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದು ಹೇಳಿದರು. ಯುವ ಜನತೆ ಕೃಷಿ ಮತ್ತು ಹೈನುಗಾರಿಕೆಯೆಡೆಗೆ ಆಕರ್ಷಿತರಾಗಬೇಕು. ಆಗ ಮಾತ್ರ ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರರು. ಸಹಕಾರಿ ಯೂನಿಯನ್‌ನ ಮಾಜಿ ಅಧ್ಯಕ್ಷ ಪಿ.ಬಿ.ದಿವಾಕರ ರೈ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಹೆಚ್.ಬಿ.ಜಯರಾಮ ರೈ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್, ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ ಅತಿಥಿಯಾಗಿ ಭಾಗವಹಿಸಿದ್ದರು.

ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಣಿ ಗೂನಡ್ಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್‌ ಜೈನ್, ನಿರ್ದೇಶಕರಾದ ಗಣಪತಿ ಭಟ್ ಪಿ.ಎನ್, ಆನಂದ ಪಿ.ಎಲ್, ಉಷಾ ಕೆ.ಎಂ, ಸುಮತಿ ಎಸ್, ಜಗದೀಶ್ ರೈ ಕೆ.ಆರ್, ಯಮುನ.ಬಿ.ಎಸ್, ಹಮೀದ್ ಹೆಚ್, ಜಾನಿ.ಕೆ.ಪಿ, ಚಂದ್ರಶೇಖರ ಕೆ.ಯು, ವೃತ್ತಿಪರ ನಿರ್ದೇಶಕರಾದ ಪ್ರಕಾಶ್.ಕೆ.ಪಿ, ರಾಜೀವಿ ಕೆ ಉಪಸ್ಥಿತರಿದ್ದರು.

ಬ್ಯಾಂಕ್‌ನ ನಿರ್ದೇಶಕರಾದ ಜಾನಿ.ಕೆ.ಪಿ. ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ವಂದಿಸಿದರು. ಜಯಾನಂದ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಕಾರ್ಯಕ್ರಮ: ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಸಂಘದ ಎಲ್ಲಾ ನಿರ್ದೇಶಕರು,ಸಂಘದ ಸಿಬ್ಬಂದಿ, ಮಾಜಿ ಸಿಬ್ಬಂದಿಗಳನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಒಟ್ಟು 180 ಮಂದಿಯನ್ನು ಸನ್ಮಾನಿಸಲಾಯಿತು.

ವಿವಿಧ ಕಾರ್ಯಕ್ರಮಗಳು: ಎರಡು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಹಳದಿ ರೋಗ ನಿಯಂತ್ರಣ ಮತ್ತು ಪರ್ಯಾಯ ವ್ಯವಸ್ಥೆ ವಿಚಾರ ಗೋಷ್ಠಿ ನಡೆಯಿತು. ಸಾಂಸ್ಕೃತಿಕ ಸಂಭ್ರಮದಲ್ಲಿ ‘ತೆಲಿಕೆದ ಗೊಂಚಿಲ್’, ‘ಸನಾತನ ನೃತ್ಯಾಂಜಲಿ’, ಸಂಗೀತ ಗಾನ ಸಂಭ್ರಮ ನಡೆಯಿತು. ‘ಯಕ್ಷಗಾನ ನಾಟ್ಯವೈಭವ’, ವಿಠಲ ನಾಯಕ್ ಕಲ್ಲಡ್ಕ ಬಳಗದಿಂದ ‘ಗೀತ ಸಾಹಿತ್ಯ’ ಕಾರ್ಯಕ್ರಮ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!