ಜ.21 ರಂದು ಮರ್ಕಂಜದಿಂದ ಔಷಧಿಗೆಂದು ತೆರಳಿದ ವಿವಾಹಿತ ಮಹಿಳೆ ಕೀರ್ತಿಶ್ರೀ ಗಂಡನ ಮನೆಗೂ, ತಾಯಿ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ರಾಜಶೇಖರ ಪೋಲೀಸರಿಗೆ ದೂರು ನೀಡಿದ್ದರು.
ಜ.22 ರಂದು ಸಂಜೆ ಮಡಿಕೇರಿಯಲ್ಲಿ ಪತ್ತೆಯಾದ ಅವಳನ್ನು ತಾಯಿ ಮನೆಗೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ. ಔಷಧಿ ತರಲು ಹೋದವಳು ಯಾಕೆ ನಾಪತ್ತೆಯಾದಳು ಎಂಬ ಬಗ್ಗೆ ಇನ್ನಷ್ಟೇ ವಿವರ ಲಭ್ಯವಾಗಬೇಕಿದೆ.