ಕಳಂಜ ಗ್ರಾಮ ಪಂಚಾಯತಿಯ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕಿಲಂಗೋಡಿಯವರ ಅಧ್ಯಕ್ಷತೆಯಲ್ಲಿ ಇಂದು(ಜ.23) ನಡೆಯಿತು. ಸಭೆಯಲ್ಲಿ ಇಲಾಖಾಧಿಕಾರಿಗಳು ಬರದಿರುವ ಬಗ್ಗೆ, ಶಿಕ್ಷಕರ ಕೊರತೆ, ಗ್ರಾಮಕ್ಕೆ ಘನತ್ಯಾಜ್ಯ ವ್ಯವಸ್ಥೆ ಮಾಡದಿರುವ ಕುರಿತು ತೀವ್ರ ಚರ್ಚೆ ನಡೆಯಿತು. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾ ಭಾಗವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ರೈ, ಸದಸ್ಯರುಗಳಾದ ಬಾಲಕೃಷ್ಣ ಬೇರಿಕೆ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಎ ಸುಧಾ, ಶ್ರೀಮತಿ ಕಮಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಯ್ಯ ಕೆ ವೇದಿಕೆಯಲ್ಲಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಯ್ಯ.ಕೆ ಸ್ವಾಗತಿಸಿದರು. ಗ್ರಾ.ಪಂ ಸಿಬ್ಬಂದಿ ತಿರುಮಲೇಶ್ವರ ಮುಂಡುಗಾರು ವರದಿ ವಾಚಿಸಿದರು. ಪಂಚಾಯತ್ ಸಿಬ್ಬಂದಿ ಗಿರಿಧರ ಕಳಂಜ ವಂದಿಸಿದರು. ಗ್ರಾಮ ಸಭೆಯಲ್ಲಿ ಭಾಸ್ಕರ ಮಣಿಮಜಲು, ಗಗನ್ ನಾಲ್ಕುತ್ತು, ಸತೀಶ್ಚಂದ್ರ, ಶುಭಕುಮಾರ್, ರವಿಪ್ರಸಾದ್ ಕಳಂಜ, ಯಶೋದಾ, ವಿಜಯ, ಸೂರ್ಯನಾರಾಯಣ ಭಟ್, ಪರಮೇಶ್ವರ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಆರೋಗ್ಯ ಇಲಾಖೆಯ ಬೇಬಿ, ಸಿ.ಡಿ.ಪಿ.ಒ ಇಲಾಖೆಯ ಉಷಾ, ಕ್ಷೇಮ ಕೇಂದ್ರದ ಶಿಲ್ಪಾ, ಶಿಕ್ಷಣ ಇಲಾಖೆಯ ಶೀಲಾವತಿ, ಪಶು ವೈದ್ಯಕೀಯ ಆಸ್ಪತ್ರೆಯ ವಿಶ್ವನಾಥ, ಗ್ರಾಮ ಆಡಳಿತಾಧಿಕಾರಿ ಶಿವಕುಮಾರ್, ತೋಟಗಾರಿಕಾ ಇಲಾಖೆಯ ವಿಜೇತ್ ಕಳಂಜ, ಬಾಳಿಲ ಪ್ರಾ.ಕೃ.ಪ.ಸ.ಸಂಘದ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ ಇಲಾಖಾ ಮಾಹಿತಿ ನೀಡಿದರು.
- Saturday
- November 23rd, 2024