




ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಡಿ.17 ರಂದು ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರಾದ ದಿನೇಶ್ ಹಾಲೆಮಜಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಚಿನ್ ಕ್ರೀಡಾ ಸಂಘದ ನೂತನ ಗೌರವಾಧ್ಯಕ್ಷರಾಗಿ ಕಾರ್ತಿಕ್ ವಾಡ್ಯಪ್ಪನಮನೆ, ಅಧ್ಯಕ್ಷರಾಗಿ ಪ್ರದೀಪ್ ಕಜ್ಜೋಡಿ, ಕಾರ್ಯದರ್ಶಿಯಾಗಿ ಪ್ರಿಯ ಕಲ್ಲೇಮಠ, ಖಜಾಂಜಿಯಾಗಿ ಕುಮಾರ್ ಕುಕ್ಕುಂದ್ರಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ರವೀಶ್ ಮೆತ್ತಡ್ಕ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.