Ad Widget

ಮರ್ಕಂಜ : ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಕಾಣೆ – ದೂರು ದಾಖಲು

ಔಷಧಿಗೆಂದು ತೆರಳಿದ ಪತ್ನಿ ಕೀರ್ತಿಶ್ರೀ ಮರಳಿ ಮನೆಗೆ ಬಾರದೇ ತಾಯಿ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ಮರ್ಕಂಜ ಗ್ರಾಮದ ರಾಜಶೇಖರ ಎಂಬವರು ಪೋಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ಕಳೆದ ತಿಂಗಳು ಡಿ.26 ರಂದು ಇವರ ಮದುವೆ ನಡೆದಿತ್ತು.
ಪತ್ನಿ ಕೀರ್ತಿಶ್ರೀ (26 ವರ್ಷ) ಜನವರಿ 21ರಂದು ಎಲಿಮಲೆ ಕ್ಲಿನಿಕ್‌ಗೆ ಮದ್ದಿಗೆಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ನಾನೇ ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆ ಆಕೆಯನ್ನು ಕರೆದುಕೊಂಡು ಹೋಗಿ ಬಸ್ಸಿನಲ್ಲಿ ಕಳಿಸಿದ್ದೆ. ನಂತರ 10.20 ಕ್ಕೆ ಅವಳ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ನಾನು ಆಕೆಯ ತಾಯಿಯ ಮನೆ ದೇವಚಳ್ಳದ ಮಂಜೋಳ್ ಕಜೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಗೂ ಕೂಡ ಆಕೆ ಬಂದಿರುವುದಿಲ್ಲ ಎಂಬ ವಿಷಯವನ್ನು ಅವರ ತಾಯಿ ತಿಳಿಸಿರುತ್ತಾರೆ. ನಂತರ ನಮಗೆ ತಿಳಿದಿರುವ ಎಲ್ಲಾ ಕಡೆಗಳಲ್ಲಿ ಆಕೆಯ ಸಂಬಂಧಿಕರ ಮನೆಗಳಲ್ಲಿಯೂ ಕೂಡ ವಿಚಾರಿಸಿದಾಗ ಯಾವುದೇ ಮಾಹಿತಿ ಲಭಿಸಿರುವುದಿಲ್ಲ. ಆದುದರಿಂದ ತಾವುಗಳು ಕಾಣೆಯಾಗಿರುವ ನನ್ನ ಪತ್ನಿ ಕೀರ್ತಿಶೀಯನ್ನು ಪತೆ ಹಚ್ಚಿ ಕೊಡಬೇಕೆಂದು ದೂರಿನಲ್ಲಿ ಪತಿ ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!