
ದಸರಾ, ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ಸುಳ್ಯದ ಕಲ್ಕಿ ಮೊಬೈಲ್ ಶಾಪ್ ತನ್ನ ಗ್ರಾಹಕರಿಗೆ ಲಕ್ಕಿ ಕೂಪನನ್ನು ಆಯೋಜಿಸಿತ್ತು. ಅದರ ಲಕ್ಕಿ ಡ್ರಾವನ್ನು ಜ.21ರಂದು ನಡೆಸಲಾಯಿತು. ಸುಳ್ಯ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕರಾದ ಸತ್ಯಪ್ರಸಾದ್ ಪುಳಿಮರಡ್ಕ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಶಿವಶಕ್ತಿ ಎಲೆಕ್ಟ್ರಿಕಲ್ ನ ವಿಕ್ರಂ ಸಿಂಗ್ ಧನಲಕ್ಷ್ಮಿ ಆಟೋ ಸ್ಪೇರ್ ನ ಜಬ್ಬರ್ ಸಿಂಗ್, ರಜಪೂತ್ ಎಲೆಕ್ಟ್ರಾನಿಕ್ಸ್ ನ ಸುರಪ್ ಸಿಂಗ್, ಪ್ರಜ್ವಲ್ ಪೆಟ್ ಶಾಪ್, ದೇವರಾಂ ರೂಪಾಲಿ ಫ್ಯಾನ್ಸಿ, ಮಹೇಂದ್ರ ನಾಮ್ ರಂಗೋಲಿ ಫ್ಯಾಶನ್, ಜಯಪ್ರಕಾಶ್, ಯೋಗೀಶ್ ಪಿ., ಸಂಸ್ಥೆಯ ಮಾಲಕರಾದ ಕೃಷ್ಣಪ್ರಸಾದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.