
ಎಣ್ಮೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಗುತ್ತಿಗೆ ಕುಂಞಿಪ್ಪ ರವರ ಸ್ಮರಣಾರ್ಥ ಅವರ ಪುತ್ರ ಉಮ್ಮರ್ ಗುತ್ತಿಗೆ(ರಿಯಾದ್) ಇವರು ಎಣ್ಮೂರು ಶಾಲೆಗೆ ಸಿಸಿ ಕ್ಯಾಮರಾವನ್ನು ಕೊಡುಗೆಯಾಗಿ ನೀಡಿದರು.
ಸಿ.ಸಿ ಕ್ಯಾಮರಾವನ್ನು ಅವರ ಹಿರಿಯ ಪುತ್ರ ಅಬ್ದುಲ್ಲರವರು ಶಾಲಾ ಮುಖ್ಯೋಪಾದ್ಯಾಯಿನಿ ಭುವನೇಶ್ವರಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್. ಡಿ.ಎಂ.ಸಿ. ಅಧ್ಯಕ್ಷ ಶರೀಫ್ ಗುತ್ತಿಗೆ, ಉಪಾಧ್ಯಕ್ಷೆ ಸುನೀತಾ ಕಜೆ, ಸಹಶಿಕ್ಷಕಿ ಗುಲಾಬಿ ಉಪಸ್ಥಿತರಿದ್ದರು.