
ಪಂಚಾಯತ್ ನ ವಾಟರ್ ಮ್ಯಾನ್ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್ ಒಳಗಡೆ ಬಿದ್ದು ಮೃತಪಟ್ಟ ಘಟನೆ ಇಂದು ಸಂಜೆ ಚೆಂಬು ಗ್ರಾಮದಿಂದ ವರದಿಯಾಗಿದೆ.
ಯು.ಚೆಂಬು ಗ್ರಾಮದ ಮಾರ್ಪಡ್ಕ ನಿವಾಸಿ ಬೊಳುಗಲ್ಲು ಆನಂದ ರವರ ಪುತ್ರ ನಿತಿನ್ (26) ಮೃತಪಟ್ಟ ದುರ್ದೈವಿ. ಪಂಚಾಯತ್ ಟ್ಯಾಂಕ್ ನಿಂದ ನೀರು ಬಿಡಲು ತೆರಳಿದ ನಿತಿನ್ ಬಾರದೇ ಇದ್ದಾಗ ಹುಡುಕಿಕೊಂಡು ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ. ಮೃತರು ತಂದೆ,ತಾಯಿ,ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಕೊಡಗು ಸಂಪಾಜೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮಡಿಕೇರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.