Ad Widget

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ; ಶ್ರೀ ದೇವರ ಬಲಿ ಉತ್ಸವ,ದೀಪೋತ್ಸವ, ವಸಂತ ಕಟ್ಟೆ ಪೂಜೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜ.18ರಂದು ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ,ದೀಪೋತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಪಾವಂಜೆ ಮೇಳದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಜ.19 ರಂದು...

ಶೇಣಿ ಹೊಸಮಜಲು ರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ – ಗ್ರಾಮಸ್ಥರ ಆಕ್ರೋಶ

ಅಮರಪಡ್ನೂರು ಗ್ರಾಮದ ಶೇಣಿ -ಹೊಸಮಜಲು ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಹಲವಾರು ದಶಕಗಳಿಂದ ಜನ ಒತ್ತಾಯ ಮಾಡುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯು ಸುಮಾರು 20 ಕ್ಕಿಂತ ಹೆಚ್ಚು ಮನೆಗಳಿಗೆ ಹಾದು ಹೋಗುತ್ತದೆ, ಮಳೆಗಾಲದಲ್ಲಿ ಕೆಸರಿನಲ್ಲಿ ನಡೆದಾಡಲಾಗದ ಪರಿಸ್ಥಿತಿಯು ಉಂಟಾಗಿತ್ತು. ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಹೋಗಲಾಗದೇ...
Ad Widget

ಕುಕ್ಕೇಟಿ ಗಂಗಾಧರ ಗೌಡ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ, ಪ್ರಸ್ತುತ ನೆಟ್ಟಣದಲ್ಲಿ ನೆಲೆಸಿರುವ ಗಂಗಾಧರ ಗೌಡ(73ವ.)ರವರು ಜ.17ರಂದು ನಿಧನರಾದರು.ಮೃತರ ಪತ್ನಿ ಒಂದೂವರೆ ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದರು. ಮೃತರು ಪುತ್ರರಾದ ಕಿರಣ್ ಕುಮಾರ್ ಕುಕ್ಕೇಟಿ, ವಿನಯ್ ಕುಮಾರ್ ಕುಕ್ಕೇಟಿ, ಪುತ್ರಿ ಶ್ರೀಮತಿ ಶಶಿಕಲಾ ರಾಮಚಂದ್ರ ಕಮಿಲ, ಸೊಸೆಯಂದಿರು,‌ ಅಳಿಯ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಬೆಳ್ಳಾರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನೂತನ ಕೊಠಡಿ ಉದ್ಘಾಟಿಸಿದ ಸಚಿವರಾದ ಬಿ.ಸಿ. ನಾಗೇಶ್ – 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿ

ಸುಮಾರು ರೂ.2.00 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ನೂತನ ಕೊಠಡಿಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಜ.18 ರಂದು ಉದ್ಘಾಟಿಸಿದರು. ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ...

ಬೆಳ್ಳಾರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನೂತನ ಕೊಠಡಿ ಉದ್ಘಾಟಿಸಿದ ಸಚಿವರಾದ ಬಿ.ಸಿ. ನಾಗೇಶ್ – 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿ

ಸುಮಾರು ರೂ.2.00 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ನೂತನ ಕೊಠಡಿಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಜ.18 ರಂದು ಉದ್ಘಾಟಿಸಿದರು. ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ...

ಜ.21 ; ಮಂಡೆಕೋಲಿನಲ್ಲಿ ವಿದ್ಯುತ್ ಅದಾಲತ್

ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ತಿಂಗಳ 3ನೇ ಶನಿವಾರ “ವಿದ್ಯುತ್ ಅದಾಲತ್‌ ನಡೆಸುವಂತೆ ಸರಕಾರದಿಂದ ಆದೇಶಿಸಿದ್ದು, ಅದರಂತೆ ಪ್ರಸಕ್ತ ತಿಂಗಳ ಮೂರನೇ ಶನಿವಾರ ಜ. 21ರಂದು ಪೂರ್ವಾಹ್ನ 11:00 ಗಂಟೆಗೆ ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್‌ ಅದಾಲತ್‌ ನಡೆಸಲು ತಿರ್ಮಾನಿಸಲಾಗಿದೆ‌. ಸದರಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ವಿದ್ಯುತ್‌ ಗ್ರಾಹಕರಿಗೆ...

ಸುಳ್ಯ ಆಮ್ ಆದ್ಮಿ ಪಾರ್ಟಿ ಚುನಾವಣಾ ಪ್ರಚಾರ ಆರಂಭ – ಮುಂಡಕಜೆಯಲ್ಲಿ ಸುಮನಾ ಬೆಳ್ಳಾರ್ಕರ್ ಸಭೆ

ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಸುಮನಾ ಬೆಳ್ಳಾರ್ಕರ್ , ಪಕ್ಷದ ಮುಖಂಡರು ಹಾಗೂ ಗುರುಪ್ರಸಾದ್ ಮೇರ್ಕಜೆ ನೇತೃತ್ವದಲ್ಲಿ, ಅಮರಮೂಡ್ನೂರು ಗ್ರಾಮದ ಮುಂಡಕಜೆಯ ವಾರ್ಡಿನಲ್ಲಿ ಸಮಸ್ಯೆ ಅಧ್ಯಯನ ಹಾಗೂ ಪ್ರಚಾರ ಅಭಿಯಾನ ನಡೆಸಿದರು. ಪರಿಶಿಷ್ಟ ವರ್ಗದ ನಿವಾಸಿಗಳ ಮುಂಡಕಜೆ ವಾರ್ಡಿನಲ್ಲಿ ಎರಡು ಮೂರು ದಶಕದಿಂದ ಬಾಕಿ ಉಳಿದಿರುವ ರಸ್ತೆ, ಮನೆ ನಿವೇಶನ...

ಜ.20 : ಕೊಲ್ಲಮೊಗ್ರ ಗ್ರಾಮಸಭೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಮೊಗ್ರ ಮತ್ತು ಕಲ್ಮಕಾರು ಗ್ರಾಮದ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜ. 20ನೇ ಶುಕ್ರವಾರ ಪೂ.ಗಂಟೆ 10.30ಕ್ಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಸಭೆಯ ಉಸ್ತುವಾರಿ ಅಧಿಕಾರಿಗಳಾಗಿ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ಇವರು ಭಾಗವಹಿಸಲಿದ್ದಾರೆ. ಗ್ರಾಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ...

2ನೇ ದಿನಕ್ಕೆ ಕಾಲಿರಿಸಿದ ಮರಳು ಸಾಗಾಟಗಾರರ ಸಂಘದ ಪ್ರತಿಭಟನೆ – ಅಕ್ರಮ ಮರಳುಗಾರಿಕೆ ತಡೆದು ಸಕ್ರಮಗೊಳಿಸಲು ಒತ್ತಾಯ

ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಿ ಅಧಿಕೃತವಾಗಿ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಸುಳ್ಯ ತಾಲೂಕು ಪಂಚಾಯತ್ ಎದುರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆ ಎರಡನೇಯ ದಿನಕ್ಕೆ ಕಾಲಿರಿಸಿದೆ.ಜ.17 ರಂದು ಸುಳ್ಯದ ಪರಿವಾರಕಾನ ನಿವಾಸಿ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಪ್ರತಿಭಟನೆಯು ಏಕಾಂಗಿ ಹೋರಾಟದ ಮೂಲಕ ಒಂದು ದಿನ ಪೂರೈಸಿ ಇದೀಗ...

ಗುತ್ತಿಗಾರು : ಸಹಕಾರ ಸಂಘದ ವತಿಯಿಂದ ಸಾಂತ್ವನ ನಿಧಿ ಹಸ್ತಾಂತರ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಮೋಹನ್ ಕುಮಾರ್ ಮುಂಡೋಡಿ ಅವರ ಮರಣ ನಿಧಿ ರೂ.5,000/- ವನ್ನು ಅವರ ಧರ್ಮಪತ್ನಿ ದುರ್ಗ ಸುಮಿತ್ರಾ ಇವರಿಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಕುಮಾರ್ ಮತ್ತು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸೂಪರ್ ವೈಸರ್ ಮನೋಜ್ ಕುಮಾರ್ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರು ಹಸ್ತಾಂತರಿಸಿದರು.
Loading posts...

All posts loaded

No more posts

error: Content is protected !!