
ಕಳಂಜ ಗ್ರಾಮ ಪಂಚಾಯತಿನ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜ.23 ಸೋಮವಾರದಂದು ಪೂರ್ವಾಹ್ನ ಗಂಟೆ 10.30ಕ್ಕೆ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ಇದರ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಳಂಜ ಗ್ರಾಮ ಪಂಚಾಯತಿನ 1ನೇ ವಾರ್ಡಿನ ಸಭೆಯು ಜ.21ರಂದು ಪೂರ್ವಾಹ್ನ ಗಂಟೆ 10.30ಕ್ಕೆ ತಂಟೆಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ 2ನೇ ವಾರ್ಡಿನ ಸಭೆಯು ಜ.21ರಂದು ಅಪರಾಹ್ನ ಗಂಟೆ 3.00ಕ್ಕೆ ವಿಷ್ಣುನಗರ ಕಳಂಜದ ಅಂಗನವಾಡಿ ಕೇಂದ್ರದಲ್ಲಿ ಜರುಗಲಿದೆ. ಆದುದರಿಂದ ಗ್ರಾಮಸ್ಥರು ವಾರ್ಡುಸಭೆ ಮತ್ತು ಗ್ರಾಮ ಸಭೆಯಲ್ಲಿ ಭಾಗವಹಿಸಿ ಗ್ರಾಮಾಭಿವೃದ್ಧಿ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತು ಸಹಕರಿಸುವಂತೆ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ ವಿನಂತಿಸಿದ್ದಾರೆ.