ಹಿರಿಯರಿಂದ ಬೆಳೆದು ಬಂದ ಸಂಪ್ರದಾಯ ಮತ್ತು ವೃತ್ತಿ ಬದುಕನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿ ನಮ್ಮ ಮುಂದಿದೆ. ಪ್ರತಿಯೊಂದು ಸಮುದಾಯದವರು ತಮ್ಮ ತಮ್ಮ ವೃತ್ತಿ ಹಾಗೂ ಬದುಕನ್ನು ಕಟ್ಟಿ ಬೆಳೆಸುದರೊಂದಿಗೆ ಸದೃಢ ಸಮಾಜವನ್ನು ಕಟ್ಟುವ ಕಾರ್ಯ ಆಗಬೇಕಾಗಿದೆ ಎಂದು ಕೆ.ವಿ.ಜಿ ವಿವಿಧ್ದೋದ್ದೇಶ ಸೌರ್ಹಾದ ಸಹಕಾರಿ (ನಿ) ಸುಳ್ಯ ಇದರ ಅಧ್ಯಕ್ಷರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಅಭಿಪ್ರಾಯ ಪಟ್ಟರು. ಅವರು ಜನವರಿ 14ರಂದು ಕುಂಬಾರರ ಗುಡಿ ಕೈಗಾರಿಕಾ ಸಂಘ (ನಿ) ಪುತ್ತೂರು ಇದರ ಮಾಣಿ ಶಾಖೆ “ಕುಂಭಶ್ರೀ” ಸಹಕಾರಿ ಭವನದ ಲೋಕಾರ್ಪಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಗುಡಿ ಕೈಗಾರಿಕೆಗಳನ್ನು ಬೆಳೆಸುವಲ್ಲಿ ಕೂಡಾ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಜನರ ಆಸೆ ಮತ್ತು ನಿರೀಕ್ಷೆಗಳನ್ನು ಪೂರೈಸುವಂತೆ ನೋಡಿಕೊಳ್ಳಬೇಕಾಗಿದೆ. ದಿನ ನಿತ್ಯ ಆರೋಗ್ಯ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಹಳೆಯ ಕಾಲದ ಜೀವನ ಕ್ರಮವನ್ನು ಜನರು ಹುಡುಕುತ್ತಿದ್ದಾರೆ. ಗ್ರಾಮೀಣ ಗುಡಿ ಕೈಗಾರಿಕೆಗಳ ಅಭಿವೃದ್ದಿಗೆ ಹಿರಿಯರಿಂದ ಸ್ಥಾಪಿತಗೊಂಡಿರುವ ಇಂತಹ ಸಹಕಾರ ಸಂಘಗಳು ಜನರ ಜೀವನ ಕ್ರಮವನ್ನು ಯೋಚಿಸಿ ಅದಕ್ಕನುಗುಣವಾಗಿ ದಿನ ನಿತ್ಯದ ಬಳಕೆಯ ವಸ್ತುಗಳನ್ನು ಪೂರೈಸುತ್ತಿರುವ ಕಾರ್ಯ ಶ್ಲಾಘನೀಯವಾದುದು. ಸಹಕಾರಿ ಸಂಘದ ಮೂಲಕ ಜನರ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಿ ಅವರ ಬದುಕಿನಲ್ಲಿ ಭದ್ರತೆಯನ್ನು ನೀಡಿರುವುದು ಅಭಿನಂದನಾರ್ಹ. ಈ ಸಹಕಾರಿ ಸಂಸ್ಥೆ ೧೩ ಶಾಖೆಗಳ ಮೂಲಕ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ನಿಮ್ಮ ಸಂಘದಿAದ ಇನ್ನಷ್ಟು ಜನರಪರ ಕೆಲಸಗಳು ನಡೆದು ಅನೇಕ ಶಾಖೆಗಳನ್ನು ತೆರೆದು ಜನತೆಯ ಆಶೋತ್ತರಗಳಿಗೆ ಸ್ಪಂದಿಸುವAತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಭಾಸ್ಕರ ಎಂ ಪೆರುವಾಯಿ ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಶ್ರೀ ಶಶಿಕುಮಾರ್ ಬಾಲ್ಯೊಟ್ಟು, ದ. ಕ ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Saturday
- November 23rd, 2024