ವಿಶ್ವಹಿಂದು ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ನೂತನ ಜವಾಬ್ದಾರಿಗಳನ್ನು ಇಂದು ಪುತ್ತೂರಿನಲ್ಲಿ ನಡೆದ ಜಿಲ್ಲಾ ಬೈಠಕ್ ನಲ್ಲಿ ಘೋಷಣೆ ಮಾಡಲಾಯಿತು. ಹಿಂದು ಯುವ ನಾಯಕ ಎಲಿಮಲೆಯ ಹರಿಪ್ರಸಾದ್ ಬಿ.ವಿ ಎಲಿಮಲೆಯವರನ್ನು ಭಜರಂಗದಳ ಪ್ರಖಂಡ ಸಂಚಾಲಕರಾಗಿ ಮತ್ತು ಯುವ ವಕೀಲ ಸಂದೀಪ್ ವಳಲಂಬೆಯವರನ್ನು ಪ್ರಖಂಡ ವಿಧಿ ಪ್ರಮುಖ್ ಆಗಿ ಘೋಷಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಜಿಲ್ಲಾ ಅಧ್ಯಕ್ಷರಾದ ಡಾ|ಕೃಷ್ಣ ಪ್ರಸನ್ನ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸತೀಶ್, ಜಿಲ್ಲಾ ಸೇವಾಪ್ರಮುಖ್ ಸೀತಾರಾಮ್ ಭಟ್, ಸಹ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು. ಸುಳ್ಯ ಪ್ರಖಂಡ ಪ್ರದಾನ ಕಾರ್ಯದರ್ಶಿ ರಂಜಿತ್ ಸುಳ್ಯ, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಹಾಗೂ ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲ್ತಡ್ಕ ಮತ್ತು ಇತರೆ ಪದಾದಿಕಾರಿಗಳು ಬೈಠಕ್ ನಲ್ಲಿ ಉಪಸ್ಥಿತರಿದ್ದರು.
- Saturday
- November 23rd, 2024