Ad Widget

ಅಯ್ಯನಕಟ್ಟೆ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕದಲ್ಲಿ ಜ.26ರಿಂದ ಜ.29ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಇಂದು (ಜ.14ರಂದು) ನಡೆಯಿತು. ಮೊದಲಾಗಿ ಮೂರುಕಲ್ಲಡ್ಕ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ ಸೇವೆ ನಡೆಯಿತು. ತದನಂತರ ಆಮಂತ್ರಣ ಪತ್ರಿಕೆಯನ್ನು ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು(ರಿ.) ಮೂರುಕಲ್ಲಡ್ಕ ಹಾಗೂ ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ-2023 ಇದರ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಮಕ್ಷಮದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ವಿಶ್ವಸ್ಥರು ಹಾಗೂ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ವಿಶ್ವಸ್ಥರಾದ ವೆಂಕಟ್ರಮಣ ಗೌಡ ತಂಟೆಪ್ಪಾಡಿ, 2023ರ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಗೌರವಾಧ್ಯಕ್ಷ ರಾಂ ಪ್ರಸಾದ್ ಕಾಂಚೋಡು, ಕಾರ್ಯಾಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ, ಕೋಶಾಧಿಕಾರಿ ಸತೀಶ್ ಕಳಂಜ, ಜೊತೆ ಕಾರ್ಯದರ್ಶಿ ಟಿ.ವಾಸುದೇವ ಆಚಾರ್ಯ, ಸಹ ಕೋಶಾಧಿಕಾರಿ ಬಿ.ಕುಶಾಲಪ್ಪ ಗೌಡ ಮಣಿಮಜಲು, ಗೌರವ ಸಲಹೆಗಾರರಾದ ಸುಧಾಕರ ರೈ ಎ.ಎಂ, ಅಚ್ಯುತ ಗೌಡ ಬಾಳಿಲ, ಬಾಳಿಲ ರಾಮಚಂದ್ರ ರಾವ್ ಗೋಕುಲ, ರುಕ್ಮಯ್ಯ ಗೌಡ ಕಳಂಜ ಹಾಗೂ ಜಾತ್ರೋತ್ಸವ ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading