ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮ ಕಾರ್ಯಕ್ರಮವು ಜ.21 ಹಾಗೂ 22ರಂದು ಸಂಪಾಜೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕಲ್ಲುಗುಂಡಿಯ ಕೂಲಿಶೆಡ್ ನಿಂದ ಶತಮಾನೋತ್ಸವ ಸಭಾಂಗಣಕ್ಕೆ ಮೆರವಣಿಗೆ ನಡೆಯಲಿದ್ದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿಯವರು ಚಾಲನೆ ನೀಡಲಿದ್ದಾರೆ. ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗಳಾದ ಗುರುದೇವಾನಂದ ಸ್ವಾಮಿಗಳು, ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ನ ರೆ.ಫಾ.ಪಾವ್ಲ್ ಕ್ರಾಸ್ತಾ, ಕಲ್ಲುಗುಂಡಿ ಮುಹಿಯ್ಯದ್ದೀನ್ ಜುಮಾ ಮಸೀದಿಯ ಖತೀಬರಾದ ಬಹು| ಅಹ್ಮದ್ ನಈಂ ಫೈಝಿರವರು ಆಶೀರ್ವಚನ ನೀಡಲಿದ್ದಾರೆ. ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಎಮ್.ಎನ್.ರಾಜೇಂದ್ರ ಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಉಸ್ತುವಾರಿ ಸಚಿವರಾದ ಎಸ್. ಅಂಗಾರರವರು ಉದ್ಘಾಟನೆಯನ್ನು ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಕೆ. ಶತಸಂಭ್ರಮದ ಸಾಕ್ಷ್ಯಚಿತ್ರ ಬಿಡುಗಡೆಯನ್ನು ಮಾಡಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷರು, ತಾಲೂಕಿನ ಸಹಕಾರ ಸಂಘಗಳ ಆಯ್ದ ಅಧ್ಯಕ್ಷರು ಹಾಗೂ ಗಣ್ಯರಿಗೆ ಮಾಜಿ ಸಚಿವ ರಮಾನಾಥ ರೈ ಸನ್ಮಾನವನ್ನು ಮಾಡಲಿದ್ದಾರೆ. ರಾಜ್ಯ ಲೋಕಸೇವಾ ಆಯೋಗ ಇದರ ನಿವೃತ್ತ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಶತಾಬ್ಧಿ ಆರೋಗ್ಯ ಸಾಂತ್ವನ ನಿಧಿ ಬಿಡುಗಡೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಬಹುಮಾನವನ್ನು ವಿತರಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ಸೆಲ್ಕೋ ಸೋಲಾರ್ ಸಿಇಓ ಮೋಹನ ಭಾಸ್ಕರ ಹೆಗಡೆ ಉಪಸ್ಥಿತರಿರುವರು.
ಜ.21 ರಂದು ಅಪರಾಹ್ನ 2 ಗಂಟೆಗೆ “ಬಲೆ ತೆಲಿಪಾಲೆ” ಖ್ಯಾತಿಯ ಉಮೇಶ್ ಮಿಜಾರು ಮೂಡಬಿದ್ರೆ ಇವರಿಂದ ” ತೆಲಿಕೆದ ಗೊಂಚಿಲ್” ಕಾರ್ಯಕ್ರಮವು ನಡೆಯಲಿದೆ. ಅಪರಾಹ್ನ 4 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಹಿರಿಯ ಕೃಷಿ ವಿಜ್ಞಾನಿ ಡಾ. ನಾಗರಾಜ್ ಎನ್ ರವರು ಹಳದಿ ರೋಗ ನಿಯಂತ್ರಣ ಮತ್ತು ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡಲಿದ್ದಾರೆ. ಸಂಜೆ 5 ಕ್ಕೆ ರಾಷ್ಟ್ರದೇವೋಭವ ಖ್ಯಾತಿ ಸನಾತನ ನಾಟ್ಯಾಲಯ ಮಂಗಳೂರು ಇದರ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದ ಮಣಿಶೇಕರ್ ಮತ್ತು ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಶಿಷ್ಯವೃಂದದವರಿಂದ “ಸನಾತನ ನೃತ್ಯಾಂಜಲಿ” ಹಾಗೂ ಅಪರಾಹ್ನ 7 ರಿಂದ ಗಾನಗಂಧರ್ವ ಬಿರುದಾಂಕಿತ, ಸಂಗೀತ ಸಾಮ್ರಾಟ್, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದೆ. ಜ.22 ರಂದು ಬೆಳಿಗ್ಗೆ 10 ಗಂಟೆಗೆ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನಗೊಳ್ಳಲಿದ್ದು, ಅಪರಾಹ್ನ 2 ರಿಂದ ವಿಠಲ ನಾಯಕ್ ಕಲ್ಲಡ್ಕ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ಸಂಜೆ 6 ರಿಂದ “ಅಜ್ಜೆ ಕೊರಗಜ್ಜೆ” ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಜ. 22 ರಂದು ಅಪರಾಹ್ನ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷೆ ಸುಚರಿತ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ಕೆ.ವಿ. ರೇಣುಕಾ ಪ್ರಸಾದ್, ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಪಿ.ಬಿ,ದಿವಾಕರ ರೈ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ., ಗ್ರಾ.ಪಂ.ಉಪಾಧ್ಯಕ್ಷೆ ಲೆಸ್ಸಿ ಮೊನಾಲಿಸಾ, ಭಾಗವಹಿಸಲಿದ್ದಾರೆ. ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ 156 ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಾಧಕರಿಗೆ ಮಾಜಿ ಜಿ.ಪಂ.ಸದಸ್ಯ ಭರತ್ ಮುಂಡೋಡಿ, ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಸಂಸ್ಥೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಯರಾಮ ಕೆ.ಸಿ., ತಾ.ಪಂ.ಮಾಜಿ ಸದಸ್ಯೆ ಪುಷ್ಪಾ ಮೇದಪ್ಪ, ತಾ.ಪಂ. ಮಾಜಿ ಸದಸ್ಯೆ ಯಶೋಧ ಶ್ರೀಧರ, ಜಿ.ಪಂ.ಮಾಜಿ ಸದಸ್ಯ ಸತೀಶ್ ನಾಯ್ಕ್ ಸನ್ಮಾನ ನೆರವೇರಿಸಲಿದ್ದಾರೆ. ಬಹುಮಾನಗಳ ವಿತರಣೆಯನ್ನು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಿ.ಎನ್.ಗಣಪತಿ ಭಟ್, ಸಹಕಾರಿ ಸಂಘದ ನಿರ್ದೇಶಕರುಗಳಾದ ಹಮೀದ್ ಎಚ್., ಆನಂದ ಪಿ.ಎಲ್., ಉಷಾ ಕೆ.ಎಂ., ಜಗದೀಶ ರೈ ಕೆ.ಆರ್., ಸುಮತಿ ಶಕ್ತಿವೇಲು, ಯಮುನಾ ಬಿ.ಎಸ್. ನೆರವೇರಿಸಲಿದ್ದಾರೆ ಎಂದು ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಸ್ವಾಗತ ಸಮಿತಿ ಸಂಚಾಲಕ ಮಹಮ್ಮದ್ ಕುಂಞ ಗೂನಡ್ಕ, ಸನ್ಮಾನ ಸಮಿತಿ ಸಂಚಾಲಕ ಕೆ.ದಾಮೋದರ ಮಾಸ್ತರ್, ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಚಿದಾನಂದ ಯು.ಎಸ್., ಪ್ರಚಾರ ಸಮಿತಿ ಸಂಚಾಲಕ ಹಾಗೂ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ವಾಹನ ನಿಲುಗಡೆ ಸಮಿತಿ ಸಂಚಾಲಕ ಮಿಜಾಫರ್ ಅಹಮ್ಮದ್, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಹಾಗೂ ಚಪ್ಪರ ಮತ್ತು ಅಲಂಕಾರ ಸಮಿತಿ ಸಂಚಾಲಕ ಗಣಪತಿ ಭಟ್ ಪಿ.ಎನ್., ನಿರ್ದೇಶಕ ಹಮೀದ್ ಹೆಚ್, ಮುಖ್ಯಕಾರ್ಯನುರ್ವಹಣಾಧಿಕಾರಿ ವೀರೇಂದ್ರಕುಮಾರ್ ಜೈನ್, ಶತಮಾನೋತ್ಸವ ಸಮಿತಿಯ ಖಜಾಂಜಿ ಜಿ.ರಾಮಚಂದ್ರ ಕಲ್ಲುಗದ್ದೆ ಉಪಸ್ಥಿತರಿದ್ದರು.