- Thursday
- November 21st, 2024
ಬಹುದಿನಗಳ ಬೇಡಿಕೆಯಾಗಿದ್ದ ಅರಂತೋಡು – ಅಡ್ತಲೆ– ಎಲಿಮಲೆ ರಸ್ತೆ ಕಾಮಗಾರಿಗೆ ಜ.8 ರಂದು ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿ ಮಾತಮಾಡಿದರು. ಈ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ ಅನುದಾನ ಇರಿಸಲಾಗಿದೆ. ಗುದ್ದಲಿಪೂಜೆ ನಡೆದ ಇಂದಿನಿಂದ ಮುಂದಿನ 1 ವಾರದೊಳಗೆ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು. ಮಾರ್ಚ್ ತಿಂಗಳೊಳಗೆ ಇರಿಸಲಾಗಿರುವ ಅನುದಾನದ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ...
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸಂಕೇಶ ಪ್ರೋಡಕ್ಷನ್ ಇದರ ನಿರ್ಮಾಣದಲ್ಲಿ ಶ್ರೀ ಚೆನ್ನಕೇಶವ ಎಂಬ ಭಕ್ತಿಗೀತೆಯು ಇಂದು ಸಂಜೆ 7.30 ಗಂಟೆಗೆ Sankesh production ಎಂಬ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ. ಲಿಂಕ್ ತೆರಯಲು ಇಲ್ಲಿ ಕ್ಕಿಕ್ ಮಾಡಿ https://youtu.be/g3CTEOq3wBE
ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಸುಳ್ಯ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳ ಅಡುಗೆ ತಯಾರಿ ಸ್ಪರ್ಧೆ ಜ.08ರಂದು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು. ಅಡುಗೆ ತಯಾರಿ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಪ್ರಥಮ ಸ್ಥಾನ ಪಡೆದಿದೆ. ಅಡುಗೆ ಸಿಬ್ಬಂದಿಗಳಾದ ಗಿರಿಜಾ ಕೆ, ಜಾನಕಿ ಮತ್ತು ಸಾವಿತ್ರಿ ಇವರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳಾದ ಅನ್ವಿತಾ ಕೆ. MResult ಕಂಪೆನಿಗೆ, ನಿಹಾರ್ ಹೆಗ್ಡೆ ಮತ್ತು ವರ್ಷಿತಾ ಜಿ. TCS ಕಂಪೆನಿಗೆ ಆಯ್ಕೆಯಾಗಿರುತ್ತಾರೆ. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ.,...