
ಎಲಿಮಲೆ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಮತ್ತು ಸೇವಾ ಭಾರತಿ helpline ಟ್ರಸ್ಟ್ (ರಿ) ಸುಳ್ಯ ಇವುಗಳ ಸಹಯೋಗದಲ್ಲಿ ಎಲಿಮಲೆ ಜ್ಞಾನ ದೀಪ ಶಾಲೆಯಲ್ಲಿ “ಬಾಲಸಂಗಮ ” ನಡೆಯಿತು. ಸುಳ್ಯ ತಾಲೂಕಿನ ಹಲವಾರು ಅಂಗನವಾಡಿ,ಶಿಶುಮಂದಿರ ಹಾಗು ಬಾಲಗೋಕುಲದಿಂದ ಒಂಭತ್ತನೇ ತರಗತಿಯ ಒಳಗಿನ ನೂರಾರು ಮಕ್ಕಳ ಸಂಗಮಕ್ಕೆ ಎಲಿಮಲೆ ಜ್ಞಾನ ದೀಪ ಶಾಲೆ ಸಾಕ್ಷಿಯಾಯಿತು. ಬಾಲಗೋಕುಲದ ಪುಟಾಣಿಗಳು ದೀಪ ಬೆಳಗಿಸುವುದರ ಮೂಲಕ ಬಾಲಸಂಗಮ ಆರಂಭಗೊಂಡಿತು. ರಾಷ್ಟ್ರೀಯ ಸ್ವಯಂಸೇವಾ ಸಂಘದ ಸಂಘ ಚಾಲಕರಾದ ತಳೂರ್ ಚಂದ್ರಶೇಖರ್ ಪ್ರಾಸ್ತಾವನೆ ಗೈದು ಶುಭಹಾರೈಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನಾ ಸೀತಾರಾಮ, ರಾ.ಸ್ವ.ಸೇ ದ ತಾಲೂಕು ಸಹ ಸಂಘ ಚಾಲಕರಾದ ಪ್ರದ್ಯಮ್ನ ಉಬರಡ್ಕ,ಜ್ಞಾನ ದೀಪದ ನಿರ್ದೇಶಕರುಗಳಾದ ರಾಧಾಕೃಷ್ಣ ,ಮಹಾವೀರ ಜೈನ್,ಕೃಷ್ಣಯ್ಯ ಮೂಲೆತೋಟ,,ಜ್ಞಾನದೀಪದ ಸಂಚಾಲಕರಾದ ಎ ವಿ ತೀರ್ಥರಾಮ ,ಶ್ರೀಮತಿ ಶೀಲಾವತಿ ಕೊಳಂಬೆ ,ನಿವೇದಿತಾ ಟ್ರಸ್ಟ್ನ ಅಧ್ಯಕ್ಷರಾದ ಇಂದಿರಾ ರೈ ,ಟ್ರಸ್ಟ್ ನ ಪದಾಧಿಕಾರಿಗಳು ಹಾಗು ನಿರ್ದೇಶಕರುಗಳು ಉಪಸ್ಥಿತರಿದ್ದರು. ಎಲಿಮಲೆ ಜ್ಞಾನ ದೀಪದ ಮುಖ್ಯೋಪಾಧ್ಯಾಯರಾದ ಗದಾಧರ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಭಗವದ್ಗೀತೆ ಕಂಠಪಾಠ, ಕಬೀರ್ ದೊಹೆ,ದೇಶಭಕ್ತಿಗೀತೆ ,ಕುಣಿತ ಭಜನೆ ,ಜನಪದ ಗೀತೆ ಮುಂತಾದ ಸ್ಪರ್ಧೆಗಳಲ್ಲಿ ಪುಟಾಣಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು.ಬಹುಮಾನ ರೂಪದಲ್ಲಿ ಹಾಗು ಭಾಗವಹಿಸಿದ ಎಲ್ಲ ಮಕ್ಕಳಿಗೂ ಪುಸ್ತಕ ನೀಡಿ ಗೌರವಿಸಲಾಯಿತು.
ಜ್ಞಾನದೀಪ ಶಾಲೆಯ ಅಧ್ಯಾಪಕ ವೃಂದ ,ಬಾಲಗೋಕುಲ,ಶಿಶುಮಂದಿರದ ಮಾತಾಜಿಯವರು ಹಾಗು ಬೇರೆ ಬೇರೆ ಶಾಲೆಯ ಶಿಕ್ಷಕರು ಹಾಗು ಪೋಷಕರು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ನೀವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಗುಣವತಿಕೊಲ್ಲಂತಡ್ಕ ಧನ್ಯವಾದ ಸಮರ್ಪಿಸಿದರು.
