ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮದದ ಪ್ರಯುಕ್ತ ಜನುವರಿ 1 ,2 ಮತ್ತು 8 ರಂದು ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಜ.1 ರಂದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಸುಳ್ಯ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ.ಉದ್ಘಾಟನೆ ನೆರವೇರಿಸಿದರು. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ ಮುಖ್ಯ ಅತಿಥಿಯಾಗಿದ್ದರು. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ಕ್ರೀಡಾ ಸಮಿತಿ ಸಂಚಾಲಕ ಜಗದೀಶ್ ಕೆ.ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ನಿರ್ದೇಶಕ ಜಗದೀಶ್ ರೈ.ಕೆ.ಆರ್.ವಂದಿಸಿದರು.
ಬಳಿಕ ಸುಳ್ಯ ತಾಲೂಕಿನ ಸಹಕಾರ ಸಂಘದ ಸದಸ್ಯರಿಗೆ ಪುರುಷರಿಗೆ
ಹಗ್ಗಜಗ್ಗಾಟ, ಗುಡ್ಡಗಾಡು ಓಟ, ಮಹಿಳೆಯರಿಗೆ ತ್ರೋಬಾಲ್ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ. ತಾಲೂಕಿನ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಲಗೋರಿ ಪಂದ್ಯಾಟ ನಡೆಯಿತು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಹಿಳಾ / ಪುರುಷ ಸದಸ್ಯರಿಗೆ ಸೋಭಾನೆ, ನೇಜಿ ಪಾಡ್ದನ,ರೈತ ಗೀತೆ (ತಂಡದಲ್ಲಿ 4 ಜನ) ನಡೆಯಿತು. ಸಂಪಾಜೆ ಗ್ರಾಮಕ್ಕೆ ಸೀಮಿತವಾಗಿ ಪುರುಷರಿಗೆ ಗುಡ್ಡಗಾಡು ಓಟ, ಭಾರದ ಗುಂಡೆಸೆತ, ಕಣ್ಣಿಗೆ ಬಟ್ಟೆ ಕಟ್ಟಿ ನಿಧಿ ಶೋಧ, ಮೂರು ಕಾಲಿನ ಓಟ, ಅಂಗಿಗೆ ಗುಬ್ಬಿ ಹಾಕಿ ಓಡುವುದು ( 50 ವರ್ಷ ಮೇಲ್ಪಟ್ಟವರಿಗೆ), ಹಗ್ಗ ಜಗ್ಗಾಟ, ಲಗೋರಿ, ಮಹಿಳೆಯರಿಗೆ ಗುಡ್ಡಗಾಡು ಓಟ, ಭಾರದ ಗುಂಡೆಸೆತ, ಕಣ್ಣಿಗೆ ಬಟ್ಟೆ ಕಟ್ಟಿ ನಿಧಿ ಶೋಧ, ನಿಂಬೆ ಚಮಚ ಓಟ, ಗೋಣಿ ಚೀಲ ಓಟ, ವಿಷ ವರ್ತುಲ, ಹಗ್ಗಜಗ್ಗಾಟ, ಲಗೋರಿ,
ಪುಕ್ಕದ ಚೆಂಡು (ಶಟಲ್ ಕಾಕ್ – 2ಜನ) ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ನಡೆಯಿತು.
ಸಂಪಾಜೆ ಗ್ರಾಮದವರಿಗೆ ಸೀಮಿತವಾಗಿ ಸಾಂಸ್ಕೃತಿಕ ಸ್ಪರ್ಧೆ ಪುರುಷರಿಗೆ ದೇಶ ಭಕ್ತಿಗೀತೆ, ಜಾನಪದಗೀತೆ, ಭಾವಗೀತೆ, ಗೀಗೀ ಪದ.
ಮಹಿಳೆಯರಿಗೆ – ದೇಶ ಭಕ್ತಿ ಗೀತೆ, ಸೋಭಾನೆ, ಭಾವಗೀತೆ, ನೇಜಿ ಪಾಡ್ದನ ಸ್ಪರ್ಧೆ ನಡೆಯಿತು.