ಆಧುನಿಕ ಯುಗದಲ್ಲಿ ಜನರು ತುತ್ತಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಆರೋಗ್ಯ ವಿಭಾಗವು ತುಂಬಾ ಶ್ರಮಪಡುತ್ತಿದೆ. ಈ ನಿಟ್ಟಿನಲ್ಲಿ ನ. 28ರಂದು ಮಾವಿನಕಟ್ಟೆ ಅಂಗನವಾಡಿಯಲ್ಲಿ ಸ್ತೂಲಕಾಯ ತಡೆಗಟ್ಟುವ ದಿನ ಹಾಗೂ ಅಂಗಾಂಗ ದಾನಿಗಳ ದಿನವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಅವರಾದ ಕುಮಾರಿ ಮೋನಿಷಾ ಜಿ.ಎಸ್ ಇವರು ಬೊಜ್ಜಿನ ಸಮಸ್ಯೆಯಿಂದ ಜನರು ಅನುಭವಿಸುತ್ತಿರುವ ತೊಂದರೆಗಳು ಹಾಗೂ ಅಂಗಾಂಗ ದಾನ ಬಗ್ಗೆ, ಇನ್ನೊಂದು ಜೀವವನ್ನು ಉಳಿಸುವಂತಹ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯವರಾದ ಶ್ರೀಮತಿ ಜಲಜಾಕ್ಷಿ, ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ನಳಿನಾಕ್ಷಿ .ಕೆ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
- Thursday
- November 21st, 2024