೨೦೨೨ ನೇ ಸಾಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನೀಡುವ ಪ್ರಸಿದ್ಧ ಗೌರವ ಡಾಕ್ಟರೇಟ್ ಪದವಿಗೆ ರಂಗಕರ್ಮಿ ಜೀವನ್ ರಾಂ ಸುಳ್ಯ ಆಯ್ಕೆ ಆಗಿದ್ದಾರೆ.
ಜೀವನ್ ರಾಂ ಸುಳ್ಯ ರಂಗಭೂಮಿ, ಜಾನಪದ, ಯಕ್ಷಗಾನ, ಸಂಗೀತ, ಕಲೆ, ಜಾದೂ, ಚಲನಚಿತ್ರ ಹಾಗೂ ಸಂಘಟನೆ ಮುಂತಾಗಿ ಸಾಂಸ್ಕೃತಿಕ ಲೋಕದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಜಾನಪದ ವಿಶ್ವವಿದ್ಯಾಲಯು ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿದೆ.
ಡಿ.೧ ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕರ್ನಾಟಕ ಜಾನಪದ ವಿ.ವಿ.ಯ ಆರನೇ ಘಟಿಕೋತ್ಸವದ ಸಂದರ್ಭದಲ್ಲಿ ಜೀವನ್ ರಾಂ ಅವರಿಗೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ಸಿ.ಎನ್. ಉಪಸ್ಥಿತರಿರುತ್ತಾರೆಂದು ಜಾನಪದ ವಿ.ವಿ.ಯ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Friday
- November 1st, 2024